More

    ಇದು ನನ್ನದಲ್ಲವೇ ಅಲ್ಲಾ; ನಟಿ ರುಕ್ಮಿಣಿ ವಸಂತ್ ಹೀಗಂದಿದ್ಯಾಕೆ

    ಬೆಂಗಳೂರು: ಕಳೆದ ವರ್ಷ ತೆರೆಕಂಡ ಸಪ್ತ ಸಾಗರದಾಚೆ ಎಲ್ಲೋ, ಬಾನ ದಾರಿಯಲ್ಲಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸದ್ದು ಮಾಡಿದ್ದ ನಟಿ ರುಕ್ಮಿಣಿ ವಸಂತ್​ ಎಲ್ಲರ ಹಾಟ್​ ಫೇವರಿಟ್​ ಆಗಿದ್ದು, ಗಾಸಿಪ್​ ಸುದ್ದಿಗಳಿಂದ ಈ ನಟಿ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಇದೀಗ ವಿಚಾರ ಒಂದರಲ್ಲಿ ರುಕ್ಮಿಣಿ ವಂಸತ್​ ಅವರ ಹೆಸರು ತಳಕು ಹಾಕಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.

    ಯಾರೋ ಕಿಡಿಗೇಡಿಗಳು ನಟಿ ರುಕ್ಮಿಣಿ ವಸಂತ್, ತಮ್ಮ ಫೋಟೋ ಮತ್ತು ಹೆಸರು ಹೀಗೆ ಎರಡೂ ದುರುಪಯೋಗ ಪಡಿಸಿಕೊಂಡಿದ್ದು, ನಟಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಬೇಸರ ಹೊರಹಾಕಿದ್ದಾರೆ.

    ವೈರಲ್​ ಆಗಿರುವ ಪೋಸ್ಟ್​ನಲ್ಲಿ ಒಂದು ನಂಬರ್ ಇದೆ. ಆ ನಂಬರ್ ಇರೋ ಡಿಪಿಯಲ್ಲಿ ರುಕ್ಮಿಣಿ ವಸಂತ್ ಫೋಟೋ ಕೂಡ ಇದೆ. ಒಂದು ಅರೆಕ್ಷಣ ಇದನ್ನ ನೋಡಿದರೆ, ಇದು ನಟಿ ರುಕ್ಮಿಣಿ ವಸಂತ್ ಅವರ ನಂಬರ್ ಅಂತ ಅನಿಸುತ್ತದೆ. ಆದರೆ, ನಿಜ ಹೇಳಬೇಕೆಂದತೆ ಇದು ರುಕ್ಮಿಣಿ ವಸಂತ್ ನಂಬರ್‌ ಅಲ್ವೇ ಅಲ್ಲ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ; ಏನದು?

    ಇದು ನನ್ನ ಫೋನ್ ನಂಬರ್ ಅಲ್ವೇ ಅಲ್ಲ. ಇದರಿಂದ ಕಾಲ್ ಬಂದ್ರೆ ರಿಸೀವ್ ಮಾಡ್ಬೇಡಿ. ಸಂದೇಶ ಬಂದ್ರೆ ರಿಯಾಕ್ಟ್ ಮಾಡ್ಬೇಡಿ. ಹಾಗೇನಾದರೂ ಬಂದರೆ, ಈ ನಂಬರ್‌ ಬ್ಲಾಕ್ ಮಾಡಿ ಎಂದು ನಟಿ ರುಕ್ಮಿಣಿ ವಸಂತ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಒಂದು ವೇಳೆ ಜನ ಇದೇ ನಟಿಯ ನಂಬರ್ ಎಂದು ತಿಳಿದು ಎಡವಟ್ಟು ಮಾಡುವ ಮುನ್ನವೇ ಅವರು ಎಚ್ಚರಿಸಿದ್ದಾರೆ.

    ರುಕ್ಮಿಣಿ ವಸಂತ್ ಗಾಸಿಪ್‌ಗಳಿಂದ ದೂರ ಉಳಿದಿದ್ಧಾರೆ. ಸುಮ್ಮನೆ ಸುದ್ದಿ ಕೂಡ ಆಗೋದಿಲ್ಲ. ಸಿನಿಮಾಗಳು ಹಿಟ್ ಆದ ಮೇಲೂ ಯಾವುದೇ ರೀತಿಯ ಬೇಡವಾದ ಸುದ್ದಿಗಳು ಇಲ್ಲ. ಆದರು ಕೆಲವು ಕಿಡಿಗೇಡಿಗಳು ರುಕ್ಮಿಣಿ ವಸಂತ್ ಫೋಟೋ ಮತ್ತು ಹೆಸರು ಎರಡೂ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts