BBK11: ಐಷಾರಾಮಿ 'ಬಿಗ್ ಬಾಸ್'​ ರೆಸಾರ್ಟ್​! ಗಾಜು ಪುಡಿ ಪುಡಿ, ಸಹಿಸಿಕೊಳ್ಳಲಾಗದ ಕಿರಿಕಿರಿ

ವಿಜಯವಾಣಿ - 2024-12-24T170929.354
Published on

BBK11: 100 ದಿನಗಳಿಗೆ ಸನ್ನಿಹಿತದಲ್ಲಿರುವ ಕನ್ನಡದ ಬಿಗ್ ಬಾಸ್​ ಸೀಸನ್​ 11 ಸ್ಪರ್ಧಿಗಳು ಇನ್ನು ಕೆಲವೇ ದಿನಗಳಲ್ಲಿ ಸೆಂಚುರಿ ಬಾರಿಸಲು ಎದುರುನೋಡುತ್ತಿದ್ದಾರೆ. ಈ ಮಧ್ಯೆ ಕಳೆದ ಭಾನುವಾರದ ಸಂಚಿಕೆಯಲ್ಲಿ ಮೇಲ್ನೋಟಕ್ಕೆ ತ್ರಿವಿಕ್ರಮ್ ಎಲಿಮಿನೇಟ್ ಆದರೂ ಆ ವಾರ ಯಾವುದೇ ವೋಟಿಂಗ್ ಲೈನ್ ತೆರೆಯದ ಕಾರಣ, ತ್ರಿವಿಕ್ರಮ್ ಸೇಫ್ ಆಗಿ ಮನೆಗೆ ಹಿಂತಿರುಗಿದರು. ಈಗ ಮತ್ತೊಂದು ಹೊಸ ವಾರಕ್ಕೆ ಕಾಲಿಟ್ಟಿರುವ 'ಬಿಗ್' ಮಂದಿಗೆ ಹೊಸ ಟಾಸ್ಕ್​ ಭಾರೀ ಅಚ್ಚರಿ ಮೂಡಿಸಿದೆ.

ಇಡೀ ಮನೆ ಬಿಗ್ ಬಾಸ್ ರೆಸಾರ್ಟ್ ಆಗಿ ತಿರುಗಿದ್ದು, ಸ್ಪರ್ಧಿಗಳಿಗೆ ಟಾಸ್ಕ್​ನ ಬಿಸಿ ತಟ್ಟಿದೆ. ಒಂದು ತಂಡ ಹೋಟೆಲ್​ಗೆ ಆಗಮಿಸುವ ಅತಿಥಿಗಳಾದರೆ, ಮತ್ತೊಂದು ತಂಡ ಹೋಟೆಲ್​ಗೆ ಬರುವ ಅತಿಥಿಗಳ ಯೋಗಕ್ಷೇಮ, ಅವರಿಗೆ ಬೇಕಿರುವ ಸೌಕರ್ಯಗಳನ್ನು ಪೂರೈಸುವ ಸಿಬ್ಬಂದಿಗಳಾಗಿದ್ದಾರೆ. ಸದ್ಯ ಇದೇ ಮನೆಯ ಸ್ಪರ್ಧಿಗಳಿಗೆ ದೊಡ್ಡ ತಲೆನೋವಾಗಿ ಕಾಡಿದೆ.

ರಜತ್​ ಮೇಲಿನ ಕೋಪವನ್ನು ಟಾಸ್ಕ್​ ಮೂಲಕ ತೀರಿಸಿಕೊಳ್ಳುತ್ತಿರುವ ಚೈತ್ರಾ ಒಂದೆಡೆಯಾದರೆ, ಮ್ಯಾನೇಜರ್ ಮೋಕ್ಷಿತಾ ಮಾತಿಗೆ ಮಂಜು ನೀರಿನ ಗ್ಲಾಸ್​ ಬೀಸಾಡಿದ್ದಾರೆ. ರೆಸಾರ್ಟ್ ಆಗಿ ತಿರುಗಿರುವ ಬಿಗ್ ಬಾಸ್​ ಮನೆಯಲ್ಲಿ ಮಾತಿನ ಜಿದ್ದಾಜಿದ್ದಿ ಆರಂಭವಾಗಿದ್ದು, ಟಾಸ್ಕ್​ ಶುರುವಾಗಿ ಒಂದು ದಿನವು ಕಳೆದಿಲ್ಲ. ಆಗಲೇ ಆಟದ ಬಿಸಿ ಮಾತಿನಲ್ಲೇ ಹೆಚ್ಚಾಗಿರುವುದು ಹೊರಬಂದಿರುವ ಪ್ರೋಮೋದಲ್ಲಿ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net