

BBK11: ನೂರು ದಿನಗಳನ್ನು ಪೂರೈಸಲು ಇನ್ನೇನು ಕೆಲವೇ ಕೆಲವು ದಿನಗಳ ಸನ್ನಿಹಿತದಲ್ಲಿರುವ ಬಿಗ್ ಬಾಸ್ ಸೀಸನ್ 11ಕ್ಕೆ ಕಿಚ್ಚನ ಈ ವಾರದ ಪಂಚಾಯತಿ ಹೊಸ ಕಳೆಯನ್ನೇ ನೀಡಿದೆ.
ಈ ವಾರ ತಮ್ಮ ಪ್ರೀತಿ ಪಾತ್ರರು ಹಾಗೂ ಕುಟುಂಬದವರನ್ನು ಕಣ್ತುಂಬಿಕೊಂಡ ಮನೆ ಮಂದಿ, ತಮ್ಮ ಅಸಲಿ ಆಟ ತೋರುವಲ್ಲಿ ಮತ್ತೊಮ್ಮೆ ಎಡವಿರುವುದು ಇದೀಗ ಸುದೀಪ್ ಅವರ ಕಣ್ಣಿಗೆ ಬಿದ್ದಿದೆ. ಈ ವಿಷಯ ಸೇರಿದಿಂತೆ ಒಂದಷ್ಟು ವಿಚಾರಗಳನ್ನು ವೇದಿಕೆಯಲ್ಲಿ ಚರ್ಚಿಸಿದ ಕಿಚ್ಚ, ಈ ವಾರವೂ ಸಹ ಸ್ಪರ್ಧಿಗಳಿಗೆ ಕಿಚ್ಚಿನ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭವ್ಯ ಆಡಿದ ಮಾತುಗಳನ್ನು ನೆನಪಿಸಿ, ಒಂದಷ್ಟು ಪ್ರಶ್ನೆಗಳನ್ನು ನೇರವಾಗಿ ಕೇಳಿದ ಸುದೀಪ್ಗೆ ಬಂದ ಉತ್ತರ ಮತ್ತು ಇತರೆ ಸ್ಪರ್ಧಿಗಳ ಮೂಗು ತೂರಿಸುವಿಕೆ ಕೆರಳಿಸಿದೆ. ತನ್ನ ಇರುವಿಕೆ ಇದ್ದರೂ ಸಹ ತನ್ನ ಮಾತನ್ನು ಕೇಳದೆ, ಒಬ್ಬರಿಗೊಬ್ಬರು ಅಲ್ಲಲ್ಲೇ ಮಾತನಾಡಿಕೊಂಡಿರುವುದು ಕಿಚ್ಚನ ಬೇಸರಕ್ಕೆ ಕಾರಣವಾಗಿದೆ.
ಭವ್ಯಗೆ ಪ್ರಶ್ನೆ ಕೇಳಿದ್ದ ವೇಳೆ ಸ್ಪಷ್ಟನೆ ನೀಡಲು ಬಂದ ತ್ರಿವಿಕ್ರಮ್, ಹನುಮಂತು ಮಾತಿನ ನಡುವೆಯೇ ಮಧ್ಯೆ ಬಾಯಿ ಹಾಕಿದ್ದು ಕಿಚ್ಚನನ್ನು ಕೆರಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಒಂದು ಕೆಲಸ ಮಾಡಿ, ನೀವೇ ಮಾತನಾಡಿಕೊಳ್ಳಿ ಎಂದು ವೇದಿಕೆಯಿಂದ ನಿರ್ಗಮಿಸಿದ್ದಾರೆ. ಅಸಲಿಗೆ ಅಲ್ಲಿ ಏನಾಯ್ತು? ನಡೆದದ್ದೇನು? ಎಂಬುದನ್ನು ಇಂದಿನ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ತಿಳಿಯಬೇಕಿದೆ.