ಗೃಹ ಸಾಲ ಬಡ್ಡಿ ದರ ಏರಿಸಿದ ಬ್ಯಾಂಕ್​ಗಳು

RBI
Published on

ನವದೆಹಲಿ: ಆರ್​ಬಿಐ ರೆಪೋ ದರ 35 ಮೂಲಾಂಶದಷ್ಟು ಏರಿಸಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕ್​ಗಳು ಗೃಹ ಸಾಲಗಳ ಬಡ್ಡಿ ದರಗಳನ್ನು ಏರಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) ಮತ್ತು ಕೆನರಾ ಬ್ಯಾಂಕ್ ಬಡ್ಡಿ ದರ ಏರಿಸಿವೆ. ಪಿಎನ್​ಬಿ ಗೃಹ ಸಾಲ ಬಡ್ಡಿ ದರಗಳನ್ನು 35 ಬಿಪಿಎಸ್​ನಷ್ಟು ಹೆಚ್ಚು ಮಾಡಿದೆ. ಆರ್​ಎಲ್​ಎಲ್​ಆರ್​ಅನ್ನು ಹಾಲಿ ಶೇಕಡ 8.40ರಿಂದ ಶೇ. 8.75ಕ್ಕೆ ಬದಲಾಯಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಡಿಸೆಂಬರ್ 8ರಿಂದಲೇ ಇದು ಅನ್ವಯಿಸುತ್ತದೆೆ. ಮನೆ ಸಾಲದ ಬಡ್ಡಿ ಶೇ. 9 ಆಗಲಿದೆ. ಇದಕ್ಕೂ ಮುನ್ನ ಅದು ಶೇ. 8.65 ಆಗಿತ್ತು. ಬಡ್ಡಿ ಪರಿಷ್ಕರಣೆಯಿಂದಾಗಿ ವಾರ್ಷಿಕ ಬಡ್ಡಿ ದರ ಶೇಕಡ 8.55ರಿಂದ ಶೇಕಡ 10.80 ವರೆಗೆ ಆಗಲಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಸಹಿತ ಹಲವು ಬ್ಯಾಂಕ್​ಗಳು ಈಗಾಗಲೇ ಬಡ್ಡಿ ದರ ಏರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net