ಹೆಸರು, ಧರ್ಮವನ್ನು ಮುಚ್ಚಿಟ್ಟು ಪ್ರೀತಿಯ ನಾಟಕವಾಡಿ ಹಣ ಪಡೆದು ಯುವತಿಗೆ ವಂಚನೆ

Accused
Published on

ಬಾಗಲಕೋಟೆ: ಹೆಸರು ಹಾಗೂ ಧರ್ಮವನ್ನು ಮುಚ್ಚಿಟ್ಟು ಪ್ರೀತಿಯ ನಾಟಕವಾಡಿ ಯುವಕನೊಬ್ಬ ಯುವತಿಗೆ ವಂಚಿಸಿರುವ ಘಟನೆ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಬಾಬು ಪಾನವಾಲೆ ಯುವತಿಗೆ ಮೋಸ ಮಾಡಿರುವ ಆರೋಪಿ. ಮುಧೋಳದಲ್ಲಿ ನೇರ ಮಾರುಕಟ್ಟೆ ವ್ಯವಹಾರ ನಡೆಸುತ್ತಿದ್ದ ಆರೋಪಿ ಪರಿಚಯವಾದ ಯುವತಿಗೆ ತಾನೊಬ್ಬ ಹಿಂದು, ನನ್ನ ಹೆಸರು ಕಿರಣ ಎಂದು ಹೇಳಿಕೊಂಡಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿ, ಮದುವೆಯಾಗುವುದಾಗಿ ನಂಬಿಸಿ ಯುವತಿಯಿಂದ ತನ್ನ ಬ್ಯಾಂಕ್​ ಖಾತೆಗೆ 2 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದ.

ನಂತರ ದಿನಗಳಲ್ಲಿ ಯುವತಿಗೆ ಆತನ ನಿಜವಾದ ಹೆಸರು ಮತ್ತು ಧರ್ಮದ ಬಗ್ಗೆ ತಿಳಿದಿದೆ. ಬಳಿಕ ಆತನ ಬಳಿ ಹಣವನ್ನು ಮರಳಿಸುವಂತೆ ಒತ್ತಾಯಿಸಿದ್ದಾಳೆ. ಆದರೆ, ಹಣ ಹಿಂತಿರುಗಿಸಲು ಒಪ್ಪದೇ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿರುವ ಆರೋಪಿ, ಮದುವೆ ಮಾಡಿಕೋ ಎಂದು ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net