ಗೋ ಕರೊನಾ ಗೋ ಪಾರ್ಟ್​ 2! ಈಗ ಓಂ ಕರೊನಾ ಭಾಗ್​ ಸ್ವಾಹ…

c
Published on

ಬೆಂಗಳೂರು: ಕರೊನಾ ಮೊದಲನೇ ಅಲೆಯಲ್ಲಿ 'ಗೋ ಕರೊನಾ ಗೋ' ಫೇಮಸ್​ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಕರೊನಾ ಎರಡನೇ ಅಲೆಯಲ್ಲೂ ಜನರು ವಿಚಿತ್ರ ವಿಚಿತ್ರ ಘೋಷಣೆಗಳನ್ನು ಹುಟ್ಟುಹಾಕಲಾರಂಭಿಸಿದ್ದಾರೆ. ಈ ಬಾರಿ 'ಓಂ ಕರೊನಾ ಭಾಗ್ ಸ್ವಾಹ' ವಿಶೇಷವಾಗಿ ವೈರಲ್​ ಆಗಿದೆ.

ಮಂತ್ರವಾದಿಯ ರೀತಿಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯೊಬ್ಬ ಹೋಮ ಹಾಕಿಕೊಂಡು ಕುಳಿತಿದ್ದಾನೆ. ಆತ ಏನೇನೋ ಮಂತ್ರಗಳನ್ನು ಹೇಳುತ್ತಿದ್ದಾನೆ. ಆತ ಎದುರಿನಲ್ಲಿ ಕುಳಿತಿರುವ ಜನರು ಓಂ ಕರೊನಾ ಬಾಗ್​ ಸ್ವಾಹ... ಎಂದು ಜಪಿಸುತ್ತಿದ್ದಾರೆ. ಇಂತದ್ದೊಂದು ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಎರಡೇ ಅಸ್ತ್ರ ಇರುವುದು. ಜನರು ಮನೆಯಿಂದ ಹೊರಬಾರದೆ ಕರೊನಾ ನಿಯಮಗಳನ್ನು ಪರಿಪಾಲಿಸಿದರೆ ಸೋಂಕು ನಿಯಂತ್ರಣ ಸಾಧ್ಯವೆನ್ನುತ್ತಾರೆ ವೈದ್ಯಕೀಯ ವಲಯದವರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net