ಮಹಿಳಾ ಎಂಪಿ ಟೇಬಲ್ ಮೇಲೆ ಹಸ್ತಮೈಥುನ ಮಾಡಿಕೊಂಡ ಸಂಸತ್ ಸಿಬ್ಬಂದಿ!

mastru
Published on

ಕ್ಯಾನ್​ಬೆರ್ರಾ: ಆಸ್ಟ್ರೇಲಿಯಾದ ಸಂಸತ್​​ ಭವನದ ಒಳಗೆ ಅಲ್ಲಿನ ಸಿಬ್ಬಂದಿಯೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಹಾಗೂ ಪೋಟೋಗಳು ಸೋಮವಾರ ಮಾಧ್ಯಮಗಳಲ್ಲಿ ಬಹಿರಂಗವಾದ ನಂತರ ಅಲ್ಲಿನ ಜನರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾದ ಸಂಸತ್​ನ ಸಿಬ್ಬಂದಿಯೊಬ್ಬ ಮಹಿಳಾ ಎಂಪಿ ಅವರ ಕೊಠಡಿಗೆ ತೆರಳಿ ಅವರ ಟೇಬಲ್ ಮೇಲೆ ಕಾಮದಾಟ ಆಡಿ, ಹಸ್ತಮೈಥುನ ಮಾಡಿಕೊಂಡಿದ್ದಾನೆ. ಅಲ್ಲದೇ ತನ್ನದೇ ವಿಡಿಯೋವನ್ನು ಚಿತ್ರಿಕರಿಸಿಕೊಂಡಿದ್ದಾನೆ. ಘಟನೆ ಬೆಳಿಕಿಗೆ ಬಂದ ನಂತರ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆಘಾತ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸನ್ ಅವರು, ಇದೊಂದು ಅಸಹ್ಯಕರ, ಅವಮಾನಕರ ಎಂದು ಹೇಳಿದ್ದಾರೆ. 2019 ರಲ್ಲಿ ಸಂಸತ್ ಸಿಬ್ಬಂದಿಯೊಬ್ಬ ತನ್ನ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಮಹಿಳೆಯೊಬ್ಬಳು ಇತ್ತೀಚೆಗಷ್ಟೇ ಸಂಸತ್ ಭವನದ ಕಾಮಕಾಂಡದ ಬಗ್ಗೆ ಆರೋಪ ಮಾಡಿದ್ದಳು. ಇದರ ಬೆನ್ನಲ್ಲೆ ಸ್ಕಾಟ್ ಮೋರಿಸ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲೇ ಸಂಸತ್​ ಮೇಲೆ ಕಪ್ಪು ಚುಕ್ಕೆ ಎಂಬಂತೆ ಹಸ್ತ ಮೈಥುನದ ಪ್ರಕರಣ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net