ಚುನಾವಣೆಯಲ್ಲಿ ಗೆದ್ದರೆ ವಾಷಿಂಗ್ ಮಷಿನ್ ಕೊಡಿಸುತ್ತೇನೆ ಎಂದು ಮಹಿಳೆಯ ಬಟ್ಟೆಗಳನ್ನು ತೊಳೆದು ಕೊಟ್ಟ ಎಐಎಡಿಎಂಕೆ ಅಭ್ಯರ್ಥಿ!

washing
kathitravan
Published on

ಚೆನ್ನೈ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಏನೇನೊ ಕಸರತ್ತು ಮಾಡುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮತದಾರರ ಬಟ್ಟೆಗಳನ್ನು ತೊಳೆದು ಸುದ್ದಿಯಾಗಿದ್ದಾರೆ.

ಹೌದು ಸದ್ಯ ತಮಿಳುನಾಡು ವಿಧಾನಸಭೆ ಚುನಾವಣೆ ಭರ್ಜರಿಯಾಗಿ ನಡೆದಿದೆ. ಎಐಎಡಿಎಂಕೆ ಪಕ್ಷದಿಂದ ತಮಿಳುನಾಡಿನ ನಾಗಪಟ್ಟಿಣಂ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿರುವ ತಂಗಾ ಕಾತಿರವನ್ ಎನ್ನುವರು ಮತದಾರರ ಸೆಳೆಯಲು ಅವರ ಬಟ್ಟೆಗಳನ್ನು ತೊಳೆದು ಕೊಟ್ಟಿದ್ದಾರೆ. ಪ್ರಚಾರಾರ್ಥ ನಾಗೋರೆಗೆ ತೆರಳಿದ್ದ ಅವರು ಮನೆಯೊಂದಕ್ಕೆ ತೆರಳಿ ಮಹಿಳೆಯಿಂದ ಬಟ್ಟೆಗಳನ್ನು ಕೇಳಿ ಪಡೆದು ಸುಮಾರು ಹತ್ತು ನಿಮಿಷ ಅವುಗಳನ್ನು ನೀಟಾಗಿ ತೊಳೆದುಕೊಟ್ಟಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದು ಬಂದರೆ ಮಹಿಳೆಯರ ಕಷ್ಟಗಳನ್ನು ನೀಗಿಸಲು ನಾನು ಪ್ರತಿ ಮನೆಗೆ ವಾಷಿಂಗ್ ಮಷಿನ್​ ನೀಡುತ್ತೇನೆ. ಇದನ್ನು ಹೇಳುವುದಕ್ಕಾಗಿ ನಾನು ಬಟ್ಟೆಗಳನ್ನು ತೊಳೆದಿದ್ದೇನೆ. ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ಮನೆ ಮನೆಗೆ ವಾಷಿಂಗ್ ಮಷಿನ್ ಕೊಡುವುದಾಗಿ ಹೇಳಿದ್ದರು ಎಂದು ಹೇಳಿದ್ದಾರೆ.

ಎಐಎಡಿಎಂಕೆ ಸಕ್ರಿಯ ಕಾರ್ಯಕರ್ತರಾಗಿರುವ 50 ರ ವಯಸ್ಸಿನ ಕಾತಿರವನ್ ಅವರು, ನಾಗಪಟ್ಟಿಣಂ ನಗರಸಭೆಯ ಅಧ್ಯಕ್ಷರೂ ಆಗಿದ್ದಾರೆ. ಪಕ್ಷ ಅವರ ಸೇವೆಯನ್ನು ಪರಿಗಣಿಸಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net