

ಬೆಂಗಳೂರು: ಬದಲಾವಣೆ ಜಗತ್ತಿನ ನಿಯಮ ಎನ್ನುತ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಒಂದು ಹೊಸ ಆಯಾಮವನ್ನು ಐಐಎಮ್ಬ್ಯೂ ಹೊತ್ತು ತಂದಿದೆ. ಇದೇ ಆಗಸ್ಟ್ 2 ಮತ್ತು 3 ರಂದು IIM ಬೆಂಗಳೂರು ಹಳೆಯ ವಿದ್ಯಾರ್ಥಿಗಳ ಸಂಘ (IIMBAA) IIMBue 2025ರ ಶೃಂಗಸಭೆಯನ್ನು ಆಯೋಜಿಸಿದೆ.
Shifting Realities, Soaring Possibilities-"ಬದಲಾಗುತ್ತಿರುವ ವಾಸ್ತವಗಳು, ಏರುತ್ತಿರುವ ಸಾಧ್ಯತೆಗಳು" ಎಂಬ ಥೀಮ್ನಡಿ ಈ ವರ್ಷದ ಶೃಂಗಸಭೆಯನ್ನು ಹಮ್ಮಿಕೊಂಡಿರುವ ಐಐಎಮ್, ಸುಮಾರು 800ಕ್ಕೂ ಹೆಚ್ಚು ವೃತ್ತಿಪರರು, ಉದ್ಯಮಿಗಳು, ಚಿಂತನಾ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ, ಅಧಿಕೃತ ಮಾನವ ಸಂಪರ್ಕಗಳು ಸೇರಿದಂತೆ ಒಂದಷ್ಟು ಪ್ರಮುಖ ವಿಚಾರಗಳನ್ನು ಚರ್ಚಿಸಲು ನಿರ್ಧರಿಸಲಾಗಿದೆ.
ಡಾ. ದೇವಿ ಶೆಟ್ಟಿ, ರೋಹಿಣಿ ನಿಲೇಕಣಿ, ಮಧುಸೂದನ್ ಸಾಯಿ, ಪುಲ್ಲೇಲ ಗೋಪಿಚಂದ್, ಕಮಲೇಶ್ ಡಿ ಪಟೇಲ್, ನಿತಿನ್ ಕಾಮತ್, ರೋಹಿತ್ ಬನ್ಸಾಲ್, ಸಾಹಿಲ್ ಬರುವಾ, ಸೌರಭ್ ಬೋತ್ರಾ, ಹಿತೇಶ್ ಒಬೆರಾಯ್, ಡಾ. ರಿಕಿ ಕೇಜ್ ಮತ್ತು ಮಾಧಬಿ ಪುರಿ ಬುಚ್ ಸೇರಿದಂತೆ ಇತರರು ಶೃಂಗಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಪ್ರತಿಯೊಬ್ಬರೂ ನಾಯಕತ್ವ, ಸ್ಥಿತಿಸ್ಥಾಪಕತ್ವ, ಭಾರತ ಮತ್ತು ಜಗತ್ತಿನ ಭವಿಷ್ಯದ ಬಗ್ಗೆ ಪ್ರಬಲ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.
“IIMbue ಕೇವಲ ಒಂದು ಈವೆಂಟ್ ಅಲ್ಲ. ಅದನ್ನೂ ಮೀರಿದ್ದು. ನಾವೆಲ್ಲರೂ ಒಟ್ಟಾಗಿ ಸೇರಿದಾಗ ಜಗತ್ತಿನಲ್ಲಿ ಏನ್ನೆಲ್ಲ ಬದಲಾವಣೆಗಳನ್ನು ತರಬಹುದು? ಯಾವುದನ್ನು ಸಾಧಿಸಬಹುದು ಎಂಬುದರ ಪ್ರಬಲ ಜ್ಞಾಪನೆಯಾಗಿದೆ” ಎಂದು IIMB ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹರೀಶ್ ಮಿತ್ತಲ್ ಹೇಳಿದ್ದಾರೆ.
"ಪ್ರಸ್ತುತ, ಬದಲಾವಣೆಯೊಂದಿಗೆ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಹೊಸ ಆಯಾಮಗಳನ್ನು, ನಾಯಕತ್ವವನ್ನು ರೂಪಿಸುವುದು ಮತ್ತು ಸಂಪರ್ಕ ಸಾಧಿಸುವ ಉದ್ದೇಶದಿಂದ IIMBue 2025 ಅನ್ನು ವಿನ್ಯಾಸಗೊಳಿಸಿದ್ದೇವೆ" ಎಂದು ಐಐಎಂಬ್ಯೂ ಸಂಚಾಲಕ ದೀಪು ಚಂದ್ರನ್ ಅಭಿಪ್ರಾಯಿಸಿದ್ದಾರೆ.
IIM ಬೆಂಗಳೂರು ಹಳೆಯ ವಿದ್ಯಾರ್ಥಿಗಳ ಸಂಘ (IIMBAA). ಇದು 30,000ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳ ಗ್ಲೋಬಲ್ ಜಾಲವನ್ನು ಪ್ರತಿನಿಧಿಸುತ್ತದೆ. ಕಾರ್ಯಕ್ರಮ, ವೇದಿಕೆ ಮತ್ತು ಪಾಲುದಾರಿಕೆಗಳ ಮೂಲಕ, ಇದು ಬೌದ್ಧಿಕ ವಿನಿಮಯ, ನಾಯಕತ್ವ ಅಭಿವೃದ್ಧಿ ಮತ್ತು ಉದ್ಯಮಶೀಲ ಸಹಯೋಗವನ್ನು ಬೆಳೆಸುತ್ತದೆ ಹಾಗೂ ಬೆಂಬಲಿಸುತ್ತದೆ. IIMBue ಪ್ರಮುಖ ನಾಯಕತ್ವ ಶೃಂಗಸಭೆಯಾಗಿದ್ದು, ಸಂವಾದ, ಸಂಪರ್ಕ ಮತ್ತು ನೈಜ-ಪ್ರಪಂಚದ ಪ್ರಭಾವವನ್ನು ಪ್ರೇರೇಪಿಸಲೆಂದೇ ವಿನ್ಯಾಸಗೊಳಿಸಲಾಗಿದೆ.