71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಯಾವುದು ಅತ್ಯುತ್ತಮ ಸಿನಿಮಾ? ಇಲ್ಲಿದೆ ವಿಜೇತರ ಪಟ್ಟಿ | National Film Awards

ವಿಜಯವಾಣಿ - 2025-08-01T193010.581
Published on

National Film Awards: 2025ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದ ಕೇಂದ್ರ ಸರ್ಕಾರ, 2023ರ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರನ್ನು ಅನಾವರಣಗೊಳಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಎಲ್. ಮುರುಗನ್ ಪ್ರಶಸ್ತಿಯನ್ನು ಘೋಷಿಸಿದರು.

ಒಟ್ಟು 13 ಅತ್ಯುತ್ತಮ ಪ್ರಾದೇಶಿಕ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ. ಇನ್ನು ಅತ್ಯುತ್ತಮ ನಟ, ನಟಿ, ಸಿನಿಮಾ, ನಿರ್ದೇಶನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಯಾರಿಗೆಲ್ಲ ಕೇಂದ್ರ ಸರ್ಕಾರದಿಂದ ಪ್ರಶಸ್ತಿಗಳು ಲಭಿಸಿವೆ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಅತ್ಯುತ್ತಮ ಚಿತ್ರ: 12th ಫೇಲ್​ (ಹಿಂದಿ) ಅತ್ಯುತ್ತಮ ನಟ: ವಿಕ್ರಾಂತ್​ ಮ್ಯಾಸ್ಸೆ (12th ಫೇಲ್​) ಅತ್ಯುತ್ತಮ ನಟ: ಶಾರೂಖ್ ಖಾನ್​ ( ಜವಾನ್​) ಅತ್ಯುತ್ತಮ ನಟಿ: ರಾಣಿ ಮುಖರ್ಜಿ (Mrs. Chatterjee vs Norway) ಅತ್ಯುತ್ತಮ ನಿರ್ದೇಶನ: ಸುದಿಪ್ಟೋ ಸೇನ್​ (ದಿ ಕೇರಳ ಸ್ಟೋರಿ) ಅತ್ಯುತ್ತಮ ಛಾಯಾಗ್ರಾಹಣ: ದಿ ಕೇರಳ ಸ್ಟೋರಿ ಅತ್ಯುತ್ತಮ ಪೋಷಕ ನಟ: ಎಂ.ಎಸ್​. ಭಾಸ್ಕರ್​ (ಪಾರ್ಕಿಂಗ್​​) ಅತ್ಯುತ್ತಮ ಪೋಷಕ ನಟಿ: ಊರ್ವಶಿ (ಉಲ್ಲೋಳುಕ್ಕು)

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು

ಅತ್ಯುತ್ತಮ ಕನ್ನಡ ಚಿತ್ರ: ಕಂದೀಲು

ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್

ಅತ್ಯುತ್ತಮ ತೆಲುಗು ಚಿತ್ರ: ಭಗವಂತ್ ಕೇಸರಿ

ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್​ಡೇ ಗಾಡ್​ಡೇ ಚಾ

ಅತ್ಯುತ್ತಮ ಹಿಂದಿ ಚಿತ್ರ: ಕಾತಲ್​: ಏ ಜಾಕ್​ಫ್ರೂಟ್​ ಮಿಸ್ಟರಿ

ಅತ್ಯುತ್ತಮ ಮಲಯಾಳಂ ಚಿತ್ರ: ಉಲ್ಲೋಳುಕ್ಕು

ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ

ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮಾಚಿ ಹೈ

ಅತ್ಯುತ್ತಮ ಬೆಂಗಾಲಿ ಚಿತ್ರ: ಡೀಪ್​ ಫ್ರಿಡ್ಜ್​

ಅತ್ಯುತ್ತಮ ಗುಜರಾತಿ ಚಿತ್ರ: ವಾಶ್​

ವಿಶೇಷ ಉಲ್ಲೇಖ: ಅನಿಮಲ್​ (ರಿ-ರೆಕಾರ್ಡಿಂಗ್ ಮಿಕ್ಸರ್​) - ಎಂ.ಆರ್​. ರಾಧಾಕೃಷ್ಣನ್

ಅತ್ಯುತ್ತಮ ಆ್ಯಕ್ಷನ್​ ನಿರ್ದೇಶನ: ಹನು-ಮ್ಯಾನ್​ (ತೆಲುಗು)

ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾನಿ ಪ್ರೇಮ್ ಕಹಾನಿ

ಅತ್ಯುತ್ತಮ ಸಾಹಿತ್ಯ: ಬಾಲಗಮ್​

ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)

ಅತ್ಯುತ್ತಮ ಮೇಕ್​-ಅಪ್​, ವಸ್ತ್ರವಿನ್ಯಾಸ: ಸಾಮ್​ ಬಹದ್ದೂರ್​

ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್​: 2018- ಎವರೀವನ್​ ಇಸ್​ ಎ ಹೀರೋ (ಮಲಯಾಳಂ)

ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ)

ಅತ್ಯುತ್ತಮ ಸೌಂಡ್​ ಡಿಸೈನ್​: ಅನಿಮಲ್​ (ಹಿಂದಿ)

ಅತ್ಯುತ್ತಮ ಚಿತ್ರಕಥೆ: ಬೇಬಿ (ತೆಲುಗು)

ಕನ್ನಡಕ್ಕೆ ಒಟ್ಟು 2 ಪ್ರಶಸ್ತಿ

'ಸನ್​ಫ್ಲವರ್​ ವೇರ್ ದಿ ಫಸ್ಟ್​ ಒನ್ ಟು ನೊ' (ಕನ್ನಡ) ಅತ್ಯುತ್ತಮ ಚಿತ್ರಕಥೆ ಗೆದ್ದರೆ, 'ಕಂದೀಲು' ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net