ಭವಿಷ್ಯದಲ್ಲಿ ಈ 40 ಉದ್ಯೋಗಗಳಿಗೆ AI ಕೊಡಲಿಪೆಟ್ಟು! ಯಾವೆಲ್ಲ ಕೆಲಸಗಳು ಕಣ್ಮರೆ? ಹೀಗಿದೆ ಮೈಕ್ರೋಸಾಫ್ಟ್ ಸಮೀಕ್ಷೆ

ವಿಜಯವಾಣಿ - 2025-08-01T181454.373
Published on

AI: ಇದು ಡಿಜಿಟಲ್​ ಯುಗ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಶರವೇಗದಲ್ಲಿ ಸಾಗುತ್ತಿರುವ ಆನ್​ಲೈನ್​ ಯುಗದಲ್ಲಿ ಸದ್ಯ ಎಲ್ಲವೂ ಅಯೋ ಮಯ. ಒಂದು ಸಣ್ಣ ಕೆಲಸದಿಂದ ಹಿಡಿದು ದೊಡ್ಡ ಮಟ್ಟದ ಕೆಲಸಗಳು ಇದೀಗ ಕೃತಕ ಬುದ್ಧಿಮತ್ತೆಯ ಸಹಾಯದಿಂದ ತೀರ ಸರಳ ಹಾಗೂ ಸುಲಭವಾಗಿಬಿಟ್ಟಿದೆ. ಜನಸಾಮಾನ್ಯರು ಕೂಡ ಇದಕ್ಕೆ ಒಗ್ಗಿಕೊಂಡಿದ್ದು, ತಮ್ಮ ದೈನಂದಿನ ಬಹುತೇಕ ಕೆಲಸಗಳನ್ನು ಎಐ ಸಹಾಯದಿಂದಲೇ ಮುಗಿಸಿಕೊಳ್ಳುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಹಲವರ ಉದ್ಯೋಗಗಳಿಗೆ ಕುತ್ತು ತಂದಿಡಲಿದೆ ಎಂಬ ಸಣ್ಣ ಅರಿವು ಇಲ್ಲದಿರುವುದು ನಿಜಕ್ಕೂ ಕಳವಳಕಾರಿ.

ಇತ್ತೀಚಿನ ವರದಿಗಳನ್ನು ಗಮನಿಸಿ ನೋಡುವುದಾದರೆ, ಪ್ರತಿಷ್ಠಿತ ಟೆಕ್​ ಕಂಪನಿಗಳಾದ ಟಿಸಿಎಸ್​, ಇನ್ಫೋಸಿಸ್​, ಮೈಕ್ರೋಸಾಫ್ಟ್​ ತನ್ನ ಉದ್ಯೋಗಗಳ ಸಂಖ್ಯೆಯನ್ನು ಇನ್ನಷ್ಟು ಕಡಿತಗೊಳಿಸುತ್ತಿದೆ. ಎಐ ಮೊರೆ ಹೋಗಿರುವ ಈ ದೈತ್ಯ ಸಂಸ್ಥೆಗಳು, ತಮ್ಮ ಸಾವಿರಾರೂ ಉದ್ಯೋಗಿಗಳಿಗೆ ದೊಡ್ಡ ದೊಡ್ಡ ಹುದ್ದೆಯಿಂದ ಗೇಟ್​ಪಾಸ್​ ನೀಡುತ್ತಿದೆ. ಇದು ನೌಕರರಲ್ಲಿ ತೀರ ಆತಂಕ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯಿಂದ ತಾವು ಮಾಡುತ್ತಿರುವ ಉದ್ಯೋಗಗಳು ಕಳೆದು ಹೋಗುತ್ತಿರುವುದು ಜನರ ಚಿಂತನೆಗೆ ಕಾರಣವಾಗಿದೆ.

ಈಗಿನ ಟೆಕ್ನಾಲಜಿಗೆ ಈ ಮಟ್ಟಿಗಿನ ವಜಾಗೊಳಿಸುವಿಕೆ ಮತ್ತು ಉದ್ಯೋಗಗಳ ಕಡಿತ ಎಂದರೆ ಇನ್ನೂ ಮುಂದಿನ ದಿನಗಳಲ್ಲಿ ಅಭಿವೃದ್ಧಿ ದುಪ್ಪಟ್ಟಾದಾಗ ಪರಿಸ್ಥಿತಿ ಹೇಗೆ? ಯಾವ ಕ್ಷೇತ್ರಗಳಲ್ಲಿ ಉದ್ಯೋಗಗಳು ನಶಿಸಿ ಹೋಗಲಿವೆ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಮೈಕ್ರೋಸಾಫ್ಟ್‌ನ ಇತ್ತೀಚಿನ ಸಮೀಕ್ಷೆಯಲ್ಲಿದೆ ಉತ್ತರ. ಸರ್ವೆ ಪ್ರಕಾರ, ವ್ಯಾಖ್ಯಾನಕಾರರು ಮತ್ತು ಭಾಷಾಂತರ ಉದ್ಯೋಗಗಳು, ಇತಿಹಾಸಕಾರರು, ಪ್ರಯಾಣಿಕರ ಪರಿಚಾರಕರು ಮತ್ತು ಸೇವೆಗಳ ಮಾರಾಟ ಪ್ರತಿನಿಧಿಗಳ ಉದ್ಯೋಗಗಳು ಎಐನಿಂದ ದೊಡ್ಡ ಹೊಡೆತವನ್ನು ಅನುಭವಿಸುವ ಸಾಧ್ಯತೆಗಳಿವೆ. ಭವಿಷ್ಯದಲ್ಲಿ ಒಟ್ಟು 40 ಉದ್ಯೋಗಗಳು ಎಐ ಪ್ರಭಾವದಿಂದ ಕಣ್ಮರೆಯಾಗಲಿವೆ.

ಯಾವುದು ಆ 40 ಉದ್ಯೋಗಗಳು?

  • ವ್ಯಾಖ್ಯಾನಕಾರರು, ಅನುವಾದಕರು
  • ಇತಿಹಾಸಕಾರರು
  • ಪ್ರಯಾಣಿಕರ ಸೇವಾ ಸಿಬ್ಬಂದಿ
  • ಸೇಲ್ಸ್​ ರಿಪ್ರಸನ್​ಟೇಟಿವ್ಸ್​
  • ಬರಹಗಾರರು, ಲೇಖಕರು
  • ಗ್ರಾಹಕ ಸೇವಾ ಪ್ರತಿನಿಧಿಗಳು
  • CNC ಪರಿಕರ ಪ್ರೋಗ್ರಾಮರ್‌ಗಳು
  • ದೂರವಾಣಿ ನಿರ್ವಾಹಕರು
  • ಟಿಕೆಟಿಂಗ್​ ಏಜೆಂಟ್‌ಗಳು, ಪ್ರಯಾಣ ಗುಮಾಸ್ತರು
  • ಪ್ರಸಾರ ಉದ್ಘೋಷಕರು, ರೇಡಿಯೋ ಡಿಜೆಗಳು
  • ದಲ್ಲಾಳಿಗಳು
  • ಕೃಷಿ ಮತ್ತು ಗೃಹ ನಿರ್ವಹಣಾ ಬೋಧಕರು
  • ಟೆಲಿ ಮಾರ್ಕೆಟರ್ಸ್​
  • ಅಸಿಸ್ಟೆಂಟ್ಸ್​
  • ರಾಜಕೀಯ ಎಕ್ಸ್​ಪರ್ಟ್ಸ್​​
  • ಸುದ್ದಿ ವಿಶ್ಲೇಷಕರು, ವರದಿಗಾರರು, ಪತ್ರಕರ್ತರುಗಣಿತಜ್ಞರು
  • ತಾಂತ್ರಿಕ ಬರಹಗಾರರು
  • ಪ್ರೂಫ್ ರೀಡರ್‌ಗಳು, ನಕಲು ಗುರುತುಗಳು
  • ನಿರೂಪಕರು
  • ಎಡಿಟರ್ಸ್​
  • ವ್ಯಾಪಾರ ಶಿಕ್ಷಕರು (ಪೋಸ್ಟ್‌ಸೆಕೆಂಡರಿ)
  • ಸಾರ್ವಜನಿಕ ಸಂಪರ್ಕ ತಜ್ಞರು
  • ಪ್ರದರ್ಶಕರು, ಉತ್ಪನ್ನ ಪ್ರವರ್ತಕರು
  • ಜಾಹೀರಾತು ಮಾರಾಟ ಏಜೆಂಟ್‌ಗಳು
  • ಹೊಸ ಖಾತೆಗಳ ಗುಮಾಸ್ತರು
  • ಅಂಕಿಅಂಶಗಳ ಸಹಾಯಕರು
  • ಕೌಂಟರ್, ರೆಂಟಲ್​ ಕ್ಲೆರ್ಕ್​
  • ಡೇಟಾ ವಿಜ್ಞಾನಿಗಳು
  • ವೈಯಕ್ತಿಕ ಹಣಕಾಸು ಸಲಹೆಗಾರರು
  • ಆರ್ಕೈವಿಸ್ಟ್‌ಗಳು
  • ಅರ್ಥಶಾಸ್ತ್ರ ಶಿಕ್ಷಕರು (ಪೋಸ್ಟ್‌ಸೆಕೆಂಡರಿ)
  • ವೆಬ್ ಡೆವಲಪರ್‌ಗಳು
  • ನಿರ್ವಹಣಾ ವಿಶ್ಲೇಷಕರು
  • ಭೂಗೋಳಶಾಸ್ತ್ರಜ್ಞರು
  • ಮಾಡೆಲ್​ಗಳು
  • ಮಾರ್ಕೆಟ್ ಸಂಶೋಧನೆ ವಿಶ್ಲೇಷಕರು
  • ಸಾರ್ವಜನಿಕ ಸುರಕ್ಷತಾ ದೂರಸಂಪರ್ಕಕಾರರು
  • ಸ್ವಿಚ್‌ಬೋರ್ಡ್ ಆಪರೇಟರ್‌ಗಳು
  • ಗ್ರಂಥಾಲಯ ವಿಜ್ಞಾನ ಶಿಕ್ಷಕರು (ಪೋಸ್ಟ್‌ಸೆಕೆಂಡರಿ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net