ಆಗಸ್ಟ್​ನಲ್ಲಿ ರಿಲೀಸ್ ಆಗಲಿರುವ ಬಹುನಿರೀಕ್ಷಿತ ಚಿತ್ರಗಳಿವು; ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಇದ್ಯಾ ನೋಡಿ | South Movies

ವಿಜಯವಾಣಿ - 2025-08-01T172228.051
Published on

South Movies: ಪ್ರತಿವಾರ ಚಿತ್ರಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿದ್ಧವಾಗಿರುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ಭಾರತೀಯ ಚಲನಚಿತ್ರೋದ್ಯಮದ ಹಲವು ಬಹುನಿರೀಕ್ಷಿತ ಚಿತ್ರಗಳು ವಾರ ಕಳೆದಂತೆ ಮತ್ತೊಂದು ವಾರಕ್ಕೆ ಕಾಲಿಡುವ ಮೂಲಕ ಪ್ರೇಕ್ಷಕರ ಎದುರಿಗೆ ಹಾಜರಾಗುತ್ತಿವೆ. ಜನರಿಂದ ಉತ್ತಮ ಹಾಗೂ ಕಳಪೆ ವಿಮರ್ಶೆಗಳನ್ನು ಪಡೆಯುವಲ್ಲಿ ಒಂದಷ್ಟು ಚಿತ್ರಗಳು ಸೋಲು ಕಂಡರೆ, ಇನ್ನೂ ಕೆಲವು ಸೂಪರ್​ಹಿಟ್​ ಆಗಿ ಬಾಕ್ಸ್ ಆಫೀಸ್​ನಲ್ಲಿ​ ಧೂಳೆಬ್ಬಿಸುತ್ತವೆ.

ಸ್ಯಾಂಡಲ್​ವುಡ್​ ಅಲೆ

ವರ್ಷದ ಮೊದಲಾರ್ಧ ಮುಗಿದು ದ್ವಿತೀಯಾರ್ಧ ಕಾಲಿಡುತ್ತಿದ್ದಂತೆ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಹಾವಳಿ ಜೋರಾಗಿದೆ. ಜುಲೈ ತಿಂಗಳ ಮಧ್ಯಂತರದಲ್ಲಿ ತೆರೆಕಂಡ ಮೂರು ಸ್ಯಾಂಡಲ್​ವುಡ್​ ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ಸ್ಟಾರ್​ ನಟರಿಲ್ಲದ, ಉತ್ತಮ ಪ್ರಚಾರ ಪಡೆಯದ 'ಸು ಫ್ರಮ್​ ಸೋ' ಸಿನಿಮಾ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದ್ದಲ್ಲದೇ, ಟಿಕೆಟ್​ ಖರೀದಿಯಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ.

ಪ್ರಸ್ತುತ, ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಅಬ್ಬರಿಸುತ್ತಿರುವ ಸ್ಯಾಂಡಲ್​ವುಡ್​ ಸಿನಿಮಾಗಳಿಗೆ ಪೈಪೋಟಿ ಕೊಡಲು ಇನ್ನೂ ಯಾವ ಚಿತ್ರಗಳು ಎಂಟ್ರಿ ಕೊಟ್ಟಿಲ್ಲ. ಆದರೆ, ಆಗಸ್ಟ್​ನಲ್ಲಿ ಬಿಡುಗಡೆ ಕಾಣಲು ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳು ಸಜ್ಜಾಗಿವೆ. ಈ ಪೈಕಿ ಯಾವೆಲ್ಲ ಚಿತ್ರಗಳು ಕೇವಲ ಆಗಸ್ಟ್​ನಲ್ಲಿ ರಿಲೀಸ್ ಆಗಲಿದೆ ಎಂಬುದರ ಪಟ್ಟಿ ಹೀಗಿದೆ ಗಮನಿಸಿ.

ಬಹುನಿರೀಕ್ಷಿತ ಚಿತ್ರಗಳ ಪಟ್ಟಿ

1. ಲವ್​ ಮ್ಯಾಟ್ರು (ಕನ್ನಡ)

ರಿಲೀಸ್ ದಿನಾಂಕ: ಆಗಸ್ಟ್ 22

2. ಪ್ರೇಮಿಗಳ ಗಮನಕ್ಕೆ (ಕನ್ನಡ)

ರಿಲೀಸ್ ದಿನಾಂಕ: ಆಗಸ್ಟ್ 08

3. ಸನ್ ಆಫ್​ ಮುತ್ತಣ್ಣ (ಕನ್ನಡ)

ರಿಲೀಸ್ ದಿನಾಂಕ: ಆಗಸ್ಟ್ 22

4. ವಾರ್​ 2 (ಹಿಂದಿ)

ರಿಲೀಸ್ ದಿನಾಂಕ: ಆಗಸ್ಟ್ 14

5. ಪರಮ ಸುಂದರಿ (ಹಿಂದಿ)

ರಿಲೀಸ್ ದಿನಾಂಕ: ಆಗಸ್ಟ್ 29

6. ಕೂಲಿ (ತಮಿಳು)

ರಿಲೀಸ್ ದಿನಾಂಕ: ಆಗಸ್ಟ್ 14

7. ಸರ್ ಮೇಡಂ (ತೆಲುಗು)

ರಿಲೀಸ್ ದಿನಾಂಕ: ಆಗಸ್ಟ್ 1

8. ಪರಧಾ (ತೆಲುಗು)

ರಿಲೀಸ್ ದಿನಾಂಕ: ಆಗಸ್ಟ್ 22

9. ಸುಂದರಕಾಂಡ (ತೆಲುಗು)

ರಿಲೀಸ್ ದಿನಾಂಕ: ಆಗಸ್ಟ್ 27

10. ಹೃದಯಪೂರ್ವಂ (ಮಲಯಾಳಂ)

ರಿಲೀಸ್ ದಿನಾಂಕ: ಆಗಸ್ಟ್ 28

11. ರಿವಾಲ್ವರ್ ರೀಟಾ (ತಮಿಳು)

ರಿಲೀಸ್ ದಿನಾಂಕ: ಆಗಸ್ಟ್ 29

12. ಕಮರೊಟ್ಟು 2 (ಕನ್ನಡ)

ರಿಲೀಸ್ ದಿನಾಂಕ: ಆಗಸ್ಟ್ 22

13. ಧಡಕ್ 2 (ಹಿಂದಿ)

ರಿಲೀಸ್ ದಿನಾಂಕ: ಆಗಸ್ಟ್ 1

14. ಸನ್ ಆಫ್​ ಸರ್ದಾರ್​ 2 (ಹಿಂದಿ)

ರಿಲೀಸ್ ದಿನಾಂಕ: ಆಗಸ್ಟ್ 1

15. ಅಜೇಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ (ಹಿಂದಿ)

ರಿಲೀಸ್ ದಿನಾಂಕ: ಆಗಸ್ಟ್ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net