ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷವಲ್ಲ: ಮುಹಮ್ಮದ್​ ಯೂನಸ್​

Muhammad Yunus
Published on

ಢಾಕಾ: 1971ರ ಬಾಂಗ್ಲಾ ವಿವೋಚ್ನನಾ ಹೋರಾಟದಲ್ಲಿ ಭಾಗಿಯಾಗಿದ್ದ ಸೈನಿಕರ ಕುಟುಂಬಸ್ಥರಿಗೆ ಉದ್ಯೋಗದಲ್ಲಿ ಮೀಸಲಾತಿ ಖಂಡಿಸಿ ದೇಶಾದ್ಯಂತ ನಡೆದ ಹಿಂಸಾಚಾರದಲ್ಲಿ 650ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ದೇಶ ಸಹಜಸ್ಥಿತಿಯತ್ತ ಮರಳುತ್ತಿದೆ. ಇದೆಲ್ಲದರ ನಡುವೆಯೂ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮುಂದುವರೆದಿದ್ದು, ಇದನ್ನು ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಯೂನಸ್​, ಬಾಂಗ್ಲಾದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷದಿಂದ ನಡೆದಿದ್ದಲ್ಲ. ಈಗ ಪತನಗೊಂಡಿರುವ ಅವಾಮಿ ಲೀಗ್ ಸರ್ಕಾರದ ಬಹಳಷ್ಟು ಬೆಂಬಲಿಗರು ಹಿಂದೂಗಳಾಗಿದ್ದರು. ಅವರ ಮೇಲೆ ನಡೆದ ದಾಳಿಗಳನ್ನು ರಾಜಕೀಯ ಉದ್ದೇಶದಿಂದ ಕೋಮು ದ್ವೇಷದ ದಾಳಿ ಎಂದು ಬಿಂಬಿಸಲಾಗಿದೆ.

Muhammad Haseena

ಈ ದಾಳಿಗಳು ರಾಜಕೀಯಪ್ರೇರಿತವಾಗಿ ನಡೆಯುತ್ತಿವೆಯೇ ಹೊರತು ಕೋಮು ದ್ವೇಷದಿಂದಲ್ಲ. ಈ ಘಟನೆಗಳ ಬಗ್ಗೆ ಭಾರತ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡಿದೆ. ದಾಳಿ ತಡೆಯಲು ನಾವು ಏನನ್ನೂ ಮಾಡುವುದಿಲ್ಲ ಎಂದು ಹೇಳಿಲ್ಲ. ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ಭಾರತದ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಇಚ್ಛೆ ಇದೆ. ಹಸೀನಾ ಇಲ್ಲದಿದ್ದರೆ ಬಾಂಗ್ಲಾ ಮತ್ತೊಂದು ಅಫ್ಗಾನಿಸ್ತಾನ ಆಗಲಿದೆ ಎಂಬ ಸಂಕಥನವನ್ನು ಭಾರತ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಾಂಗ್ಲಾದಲ್ಲಿರುವ ಇಸ್ಲಾಂ ಸಮುದಾಯದವರು ದೇಶವನ್ನು ಮತ್ತೊಂದು ಅಫ್ಗಾನಿಸ್ತಾನ ಮಾಡಲು ಹೊರಟಿದ್ದಾರೆ ಎಂಬ ಸಂಕಥನವನ್ನು ಭಾರತ ರೂಪಿಸಿದೆ. ಹಸೀನಾ ಕೈಯಲ್ಲಿ ಮಾತ್ರ ಬಾಂಗ್ಲಾ ಸುರಕ್ಷಿತ ಎಂದು ಅಪಪ್ರಚಾರ ಮಾಡಲಾಗಿದೆ. ಭಾರತ ಈ ಸಂಕಥನದಿಂದ ಹೊರಬರಬೇಕು. ಪ್ರಧಾನಿ ನರೇಂದ್ರ ಮೋದಿಯವರಿಗೂ ಇದು ಉತ್ಪ್ರೇಕ್ಷಿತ ಎಂದು ತಿಳಿಸಿದ್ದೇನೆ. ಈ ವಿಷಯಕ್ಕೆ ಹಲವು ಕೋನಗಳಿವೆ. ಹಸೀನಾ ಸರ್ಕಾರದ ದೌರ್ಜನ್ಯದ ವಿರುದ್ಧ ದಂಗೆ ಎದ್ದಿದ್ದ ಜನರು ಅವರ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರ ಮೇಲೂ ದಾಳಿ ನಡೆಸಿದ್ದಾರೆ ಎಂದು ಮಧ್ಯಂತರ ಸರ್ಕಾರದ ವಕ್ತಾರ ಮುಹಮ್ಮದ್​ ಯೂನಸ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net