ಚಿತ್ರದುರ್ಗ: ಕೆಲ ದಿನಗಳ ಹಿಂದಷ್ಟೇ ವಿಧಾನಸೌಧದ ಮುಂಭಾಗ ಸ್ಕೂಟರ್ಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆಯುವ ಮೂಲಕ ಸುದ್ದಿಯಾಗಿದ್ದ ಪೃಥ್ವಿರಾಜ್ ಎಂಬ ಯುವಕ ಇದೀಗ ಮತ್ತೊಮ್ಮೆ ತನ್ನ ಅತಿರೇಕ ವರ್ತನೆಯನ್ನು ಆರಂಭಿಸಿದ್ದಾನೆ. ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಗಾಂಧಿನಗರದ ನಿವಾಸಿಯಾದ ಈತ ಇದೀಗ ತಹಸೀಲ್ದಾರ್ ಕಾರಿಗೆ ಬೆಂಕಿ ಹಚ್ಚುವ ಮೂಲಕ ಸುದ್ದಿಯಾಗಿದ್ದಾನೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌಧ ಬಳಿ ಬೈಕ್‌ಗೆ ಬೆಂಕಿಯಿಟ್ಟಿದ್ದನು. ಆಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಾನು ಪ್ರತಿಭಟನೆ ಮಾಡುವ ಉದ್ದೇಶದಿಂದ ಬೈಕ್‌ಗೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದನು. ಆಗ ವಿಧಾನಸೌಧ ಪೊಲೀಸರು ಈತನಿಗೆ ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಊರಿಗೆ ವಾಪಸ್ ಕಳುಹಿಸಿದ್ದರು. ಕೆಲ ಸುಮ್ಮನಿದ್ದ ಈತ ಇದೀಗ ತಹಸೀಲ್ದಾರ್ ಕಾರಿಗೆ ಬೆಂಕಿ ಹಚ್ಚುವ ಮೂಲಕ ಮತ್ತೊಮ್ಮೆ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾನೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಜಾಗೃತಿಗೆ ‘ಪಿಂಕ್ ಪವರ್ ರನ್’
ಚಳ್ಳಕೆರೆ ನಿವಾಸಿಯಾದ ಪೃಥ್ವಿರಾಜ್ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ತಹಸೀಲ್ದಾರ್ ಕಚೇರಿ ಪ್ರವೇಶಿಸಿದ್ದಾನೆ. ಈ ವೇಳೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಜೀಪ್ ಏರಿದ ಯುವಕ ತನ್ನ ಬಳಿ ಇದ್ದ ಪೆಟ್ರೋಲ್ ಕ್ಯಾನ್ನಿಂದ ತಹಶೀಲ್ದಾರ್ ಅವರ ಜೀಪ್ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನು ಗಮನಿಸಿದ ಜನ ಕೂಡಲೇ ಬೆಂಕಿಯನ್ನು ನಂದಿಸಿದ್ದು, ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ವ್ಯಕ್ತಿಯೂ ಈ ಹಿಂದೆ ನನ್ನ ತಾಯಿಗೆ ನಿಂದನೆ ಮಾಡಿರುವ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ತನ್ನ ತಾಯಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದನು. ಇದಕ್ಕೆ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ನಾನು ಟೆರರಿಸ್ಟ್ ಆಗುತ್ತೇನೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪಕ್ಕದ ಸೆಲ್‌ಗೆ ನನ್ನನ್ನೂ ಹಾಕಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಆಗ, ಪೊಲೀಸರು ಈತನನ್ನು ವಶಕ್ಕೆ ಪಡೆದು ಬುದ್ಧಿವಾದ ಹೇಳಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಕಳಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಬೆಂಗಳೂರಿನ ವಿಧಾನಸೌಧದ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದನು. ಈಗ ತಹಸೀಲ್ದಾರ ಜೀಪಿಗೂ ಬೆಂಕಿ ಹಚ್ಚಿದ್ದಾನೆ.