ನನ್ನ ಮುಂದಿನ ಚಿತ್ರ 3,000 ಕೋಟಿ ರೂ. ಗಳಿಸಲು ಈ ಇಬ್ಬರು ಸ್ಟಾರ್​ ನಟರು ಬೇಕು: ನಿರ್ದೇಶಕ ಅಟ್ಲೀ

Untitled design - 2023-10-08T122207.472
Published on

ಮುಂಬೈ: ಬಾಲಿವುಡ್​ ಅಂಗಳಕ್ಕೆ 'ಜವಾನ್'​ ಚಿತ್ರದ ಮುಖೇನ ಎಂಟ್ರಿ ಕೊಟ್ಟ ನಿರ್ದೇಶಕ ಅಟ್ಲೀ ಕುಮಾರ್, ಇಂದು ಸಿನಿಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾರೂಖ್ ಖಾನ್ ಮತ್ತು ನಯನತಾರ ಮುಖ್ಯಭೂಮಿಕೆಯಲ್ಲಿ ನಟಿಸಿದ ಜವಾನ್​ ಇದೀಗ ಬಾಕ್ಸ್​ ಆಫೀಸ್​ನಲ್ಲಿ 1,100 ಕೋಟಿ ರೂ. ಗಳಿಕೆ ಕಂಡಿದ್ದು, 2023ರ ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿದೆ.

ಆಕ್ಷನ್-ಡ್ರಾಮಾ ಜಾನರ್​ನ 'ಜವಾನ್ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ನಿರ್ದೇಶನವನ್ನು ಸಿನಿಪ್ರೇಕ್ಷಕರ ಮುಂದಿಟ್ಟ ಅಟ್ಲೀ ಸಿನಿಮಾದ ಫೈಟ್ಸ್​, ಮ್ಯೂಸಿಕ್​, ವಿಎಫ್​ಎಕ್ಸ್​ ಕೆಲಸಗಳಿಗೆ ಹೆಚ್ಚು ಪ್ರಶಂಸೆ ಪಡೆದುಕೊಂಡರು. ಸದ್ಯ ಚಿತ್ರದ ಗೆಲುವಿನಲ್ಲಿರುವ ಅಟ್ಲೀ ತಮ್ಮ ಮುಂದಿನ ಪ್ರಾಜೆಕ್ಟ್​ಗಳನ್ನು ದೊಡ್ಡ ಮಟ್ಟದಲ್ಲಿ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಇತ್ತೀಚೆಗೆ ಮಾತನಾಡಿದ ಅವರು, ತನ್ನ ಮುಂದಿನ ಪ್ರಾಜೆಕ್ಟ್​ 3000 ಕೋಟಿ ರೂ. ಕಲೆಕ್ಷನ್​ ಮಾಡಲಿದೆ. ಆ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ತಮಿಳು ಸ್ಟಾರ್ ದಳಪತಿ ವಿಜಯ್ ಇಬ್ಬರು ಇರಲಿದ್ದಾರೆ ಎಂದು ಹೇಳಿದರು. ಸದ್ಯ ಈ ಒಂದು ಹೇಳಿಕೆ ಇದೀಗ ಭಾರತೀಯ ಚಿತ್ರರಂಗ ಸೇರಿದಂತೆ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ಈ ಹಿಂದೆ ತೆಲುಗಿನ ಸ್ಟೈಲಿಶ್ ಸ್ಟಾರ್​, ನಟ ಅಲ್ಲು ಅರ್ಜುನ್​ ಅವರೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿತ್ತು. ಇದೀಗ ಅದರ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದ್ದು, ಯಾರೊಂದಿಗೆ ಚಿತ್ರವನ್ನು ಮೊದಲು ಮಾಡಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಅದು ಅಲ್ಲು ಅರ್ಜುನ್ ಜತೆಗೋ​ ಅಥವಾ ಎಸ್‌ಆರ್‌ಕೆ-ವಿಜಯ್ ಅವರೊಟ್ಟಿಗೋ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net