ಬಿಡುಗಡೆಗೂ ಮುನ್ನವೇ ಭಾರೀ ಭರವಸೆ; 'ಲಿಯೋ' ನಿರ್ದೇಶಕ ಹೇಳಿದ ಸಂಗತಿಗಳು ಹೀಗಿವೆ

Untitled design - 2023-10-08T102057.366
Published on

ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್​ ದಳಪತಿ ವಿಜಯ್​ ಮತ್ತು ನಟಿ ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಲಿಯೋ' ಚಿತ್ರದ ರಿಲೀಸ್​ಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಸಿನಿಮಾ ಕುರಿತು ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳು ವ್ಯಕ್ತವಾಗುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ 'ಲಿಯೋ' ಟ್ರೇಲರ್​ಗೆ ಭಾರೀ ಬೇಡಿಕೆಯಿಟ್ಟಿದ್ದ ದಳಪತಿ ಅಭಿಮಾನಿಗಳು ಇತ್ತೀಚೆಗೆ ಟ್ರೇಲರ್​ ನೋಡಿ ಫಿದಾ ಆಗಿದ್ದು, ಸದ್ಯ ಟ್ರೇಲರ್​ ಬೆನ್ನಲ್ಲೇ ಅಕ್ಟೋಬರ್​ 19 ರಂದು ಚಿತ್ರದ ರಿಲೀಸ್​ಗಾಗಿ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಎಲ್ಲೆಡೆ ಸುದ್ದಿಯಾಗುತ್ತಿರುವ ಲಿಯೋ ಬಗ್ಗೆ ನಿರ್ದೇಶಕ ಲೋಕೇಶ್​ ಕನಕರಾಜ್​ ಮನಬಿಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಲೋಕೇಶ್,​ 'ಲಿಯೋ' ಅತ್ಯುತ್ತಮ ತಾಂತ್ರಿಕ ಮೌಲ್ಯಗಳನ್ನು ಹೊಂದಲಿದೆ. ಚಿತ್ರದಲ್ಲಿ ವಿಎಫ್​ಎಕ್ಸ್​ ಕೆಲಸಗಳು ಸಿನಿಪ್ರೇಕ್ಷಕರಿಗೆ ಇಷ್ಟವಾಗಲಿದೆ. ಹೈನಾ ಮತ್ತು ವಿಜಯ್ ಒಳಗೊಂಡ ಹತ್ತು ನಿಮಿಷಗಳ ಸಾಹಸ ದೃಶ್ಯವಿದೆ. ನಮ್ಮ ತಂಡವು ಕಾರ್ ಚೇಸ್ ಸೀಕ್ವೆನ್ಸ್‌ ಅನ್ನು ಉತ್ತಮವಾಗಿ ತೋರಿಸಲು ಸಾಕಷ್ಟು ಪ್ರಯತ್ನವನ್ನು ಮಾಡಿದೆ ಎಂದು ಹೇಳಿದರು.

'ಲಿಯೋ' ಚಿತ್ರದಲ್ಲಿನ ವಿಎಫ್‌ಎಕ್ಸ್ ಕೆಲಸಗಳನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಲೋಕೇಶ್ ಕನಕರಾಜ್, ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ತಮ್ಮ ತಂಡವು ಸಿಜಿಐನಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ವಿಜಯ್​, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಸೂರ್ಯ, ಅರ್ಜುನ್​ ದಾಸ್, ನೀವಿನ್​ ಪೌಲಿ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್​ ಹಾಡುಗಳನ್ನು ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net