15ನೇ ವಯಸ್ಸಿಗೆ ಗರ್ಭಿಣಿಯಾಗಿದ್ದರು ಮೀನಾ; ಹೀಗ್ಯಾಕೆ ಹೇಳಿದ್ರು ಹಿರಿಯ ನಟ

Actress Meena
Published on

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಮಗಳು ನೈನಿಕಾ ಕೂಡ ಬಾಲನಟಿಯಾಗಿ ಮಿಂಚುತ್ತಿದ್ದಾರೆ. ಗಂಡ ಮರಣ ಹೊಂದಿದ ಬಳಿಕ ಏಕಾಂಗಿಯಾಗಿರುವ ಮೀನಾ, ನಟನೆ ಕಡೆ ಗಮನ ಹರಿಸಿದ್ದಾರೆ. ಇದೀಗ ಮೀನಾ ಅವರ ಬಗ್ಗೆ ತಮಿಳು ನಟ ರಾಜ್​ಕಿರಣ್​ ಅವರು ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮೀನಾ ದಕ್ಷಿಣ ಭಾರತದ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ, ನಟಿ ಮೀನಾ 15 ವರ್ಷಕ್ಕೆ ಗರ್ಭೀಣಿಯಾಗಿದ್ದರು ಎಂಬ ಸುದ್ದಿ ಇದೀಗ ಕೇಳಿ ಬಂದಿದ್ದು, ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಅದು ಕೂಡ ಈ ವಿಚಾರ ಮೀನಾ 40 ಕಾರ್ಯಕ್ರಮದಲ್ಲಿ ರಿವೀಲ್​ ಆಗಿರುವುದು ಹಲವರಲ್ಲಿ ಆಶ್ವರ್ಯ ಮೂಡಿಸಿದೆ.

ಪತಿ ನಿಧನದ ಬಳಿಕ ಇದೇ ನಟಿಯ ಬಗ್ಗೆ ಬಗೆಬಗೆ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಮೀನಾ ಎರಡನೇ ಮದುವೆ ಆಗಲಿದ್ದಾರೆ, ಧನುಷ್‌ ಜತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಅದೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ಮೀನಾ, ತಾವಾಯ್ತು, ತಮ್ಮ ಪಾಡಾಯ್ತು ಎಂದಷ್ಟೇ ಮುಂದುವರಿದಿದ್ದರು. ಈ ವಿಚಾರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹೇಳಿಕೊಂಡು, ಗಾಸಿಪ್‌ಗಳಿಗೆ ತೆರೆ ಎಳೆದಿದ್ದರು. ಈಗ ಇದೇ ನಟಿಯ ಬಗ್ಗೆ ತಮಿಳಿನ ಖ್ಯಾತ ನಟ ರಾಜ್‌ಕಿರಣ್‌ ಒಂದಷ್ಟು ವಿಚಾರ ಹೇಳಿಕೊಂಡಿದ್ದಾರೆ.

Raj Meena

ಮೀನಾ ಇತ್ತೀಚೆಗೆ 40 ವರ್ಷಗಳ ಸಿನಿ ಜರ್ನಿಯನ್ನು ಸಂಭ್ರಮಿಸಿದ್ದರು. ಇದಕ್ಕಾಗಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ರಜನಿಕಾಂತ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಅದೇ ಕಾರ್ಯಕ್ರಮಕ್ಕೆ ರಾಜ್ ಕಿರಣ್‌ ಕೂಡ ಬಂದಿದ್ದರು. ಆ ವೇಳೆ ಅವರೊಂದಿಗೆ ಮೀನಾ ನಟಿಸಿದ ಕ್ಷಣಗಳನ್ನು ಮೆಲುಕು ಹಾಕಿದ್ದರು. 'ಎನ್‌ ರಸವಿನ್ ಮನಸಿಲೆ' ಸಿನಿಮಾಗೆ ಮೀನಾ ಆಯ್ಕೆ ಆದಾಗ, ನಿರ್ದೇಶಕರಿಗೆ ಮೀನಾ ತುಂಬಾ ಚಿಕ್ಕವಳಂತೆ ಕಾಣುತ್ತಾಳೆ. ಅಂತಹ ಪಾತ್ರಕ್ಕೆ ಸರಿಹೊಂದುತ್ತಾಳಾ ಎಂದು ಹೇಳಿದ್ದರಂತೆ.

ಮೀನಾ ಈ ಸಿನಿಮಾದಲ್ಲಿ ನಟಿಸುವಾಗ ಕೇವಲ 15 ವರ್ಷ. ಆದರೆ, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರದಲ್ಲಿ ನಟಿಸಬೇಕಿತ್ತು. ಈ ಬಗ್ಗೆ ಇಡೀ ತಂಡಕ್ಕೆ ಅನುಮಾನವಿತ್ತು. ಆದರೆ, ಮೀನಾ ಆ ಪಾತ್ರದಲ್ಲಿ ಅಷ್ಟು ಎಫೆಕ್ಟಿವ್ ಆಗಿ ನಟಿಸಿದ್ದರು. ಮೀನಾ ಗರ್ಭಿಣಿಯಾಗಿ ನಟಿಸಿದ್ದ ಈ ಸಿನಿಮಾ ಥಿಯೇಟರ್‌ನಲ್ಲಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿತ್ತು. ನಿರ್ದೇಶಕರು ಮೀನಾಳ ಮೇಲಿಟ್ಟಿದ್ದ ಭರವಸೆ ಹುಸಿಯಾಗಲಿಲ್ಲ. ಅಂದುಕೊಂಡಂತೆ ಚಿಕ್ಕವಯಸ್ಸಿನಲ್ಲಿಯೇ ಗರ್ಭಿಣಿ ಪಾತ್ರವನ್ನು ನಿಭಾಯಿಸಿ ಎಲ್ಲರ ಗಮನ ಸೆಳೆದಿದ್ದರು ಮೀನಾ. ಈ ಮೂಲಕ ಮೀನಾ 15 ವರ್ಷ ವಯಸ್ಸಿನಲ್ಲಿದ್ದಾಗಲೇ ಗರ್ಭಿಣಿ ಪಾತ್ರ ನಿಭಾಯಿಸಿದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನಟ ರಾಜ್​ಕಿರಣ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net