More

    ಶುಭಮನ್​ ಗಿಲ್​ ಆಕರ್ಷಕ ಶತಕ; ಸಾರಾ ಬಾಬಿ ಎಲ್ಲಿ ಎಂದ ಅಭಿಮಾನಿಗಳು

    ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಸರಣಿಯ ಅಂತಿಮ ಪಂದ್ಯ ಮಹತ್ತರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಐಡನೇ ಟೆಸ್ಟ್​ ಪಂದ್ಯದಲ್ಲೂ ಪ್ರವಾಸಿ ತಂಡದ ಎದುರು ಅತಿಥೇಯರು ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದಾರೆ.

    ಮೊದಲನೇ ದಿನದಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ಟೀಮ್​ ಇಂಡಿಯಾ ಎರಡನೇ ದಿನವೂ ಕೂಡ ಭರ್ಜರಿ ಆರಂಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಾಯಕ ರೋಹಿತ್​ ಶರ್ಮಾ ಹಾಗೂ ಶುಭಮನ್​ ಗಿಲ್​ ಭರ್ಜರಿ ಶತಕ ಸಿಡಿಸುವ ಮೂಲಕ ಪ್ರವಾಸಿ ತಂಡಕ್ಕೆ ದಿಟ್ಟ ತಿರುಗೇಟು ನೀಡಿದ್ದಾರೆ.

    ಎರಡನೇ ದಿನದಾಟ ಆರಂಭಿಸಿದ ಭಾರತ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದೆ. ರೋಹಿತ್ 154 ಎಸೆತಗಳಲ್ಲಿ 13 ಫೋರ್, 3 ಸಿಕ್ಸರ್​ನೊಂದಿಗೆ ಶತಕ ಪೂರೈಸಿದರು. ಗಿಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ 137 ಎಸೆತಗಳಲ್ಲಿ 10 ಫೋರ್, 5 ಸಿಕ್ಸರ್​ನೊಂದಿಗೆ 100 ರನ್ ಗಳಿಸಿದರು. 250 ರನ್​ಗಳ ಗಡಿ ದಾಟುವ ಮೂಲಕ ಭಾರತ ಉತ್ತಮ ಮುನ್ನಡೆ ಸಾಧಿಸಿತ್ತು.

    ಇದನ್ನೂ ಓದಿ: ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಶಾಕ್; ಕ್ರಿಕೆಟ್​ಗೆ ವಿದಾಯ ಹೇಳಲು ಮುಂದಾದ ಸ್ಟಾರ್​ ಆಟಗಾರ

    ಒಂದೆಡೆ ಶುಭಮನ್​ ಗಿಲ್​ ಶತಕ ಡಾಭಿಮಾನಿಗಳಿಗೆ ಖುಷಿ ತಂದರೆ, ಮತ್ತೊಂದೆಡೆ ಅಭಿಮಾನಿಗಳು ಇದನ್ನು ಬೇರೆ ರೀತಿಯಲ್ಲಿ ಸಂಭ್ರಮಿಸಿದ್ಧಾರೆ. ಸಾರಾ ಬಾಬಿ ಜೈಸೀ ಹೋ ಎಂದು ಶುಭಮನ್​ ಗಿಲ್​ ಶತಕ ಸಿಡಿಸಿದ ವೇಳೆ ಮೈದಾನದಲ್ಲಿದ್ದ ಅಭಿಮಾನಿಗಳು ಅವರನ್ನು ಕಿಚ್ಚಾಯಿಸಿದ್ದಾರೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

    ಟೀಮ್​ ಇಂಡಿಯಾ ಸೇರ್ಪಡೆಯಾಗುವ ಮುನ್ನವೇ ಶುಭಮನ್​ ಗಿಲ್​ ಮತ್ತು ಸಾರಾ ನಡುವಿನ ಪ್ರೀತಿಯ ವಿಚಾರ ಬಹಳ ಸುದ್ದಿಯಾಗಿತ್ತು. ಆಗಿನ್ನೂ ಗಿಲ್​ ದೇಸಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಐಪಿಎಲ್​ನಲ್ಲೂ ಭಾಗವಹಿಸಿದ್ದರು. ಆದರೆ, ಈಗಿನಂತೆ ಆಗ ತಮ್ಮ ಬ್ಯಾಟಿಂಗ್​ ಸ್ಕಿಲ್​ ಮೂಲಕ ಹೆಚ್ಚೇನೂ ಗುರುತಿಸಿಕೊಂಡಿರಲಿಲ್ಲ. ಆ ವೇಳೆಯೇ ಸಾರಾ ಮತ್ತು ಶುಭಮನ್​ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು. ಇಬ್ಬರು ಡೇಟಿಂಗ್​ ಮಾಡುತ್ತಿರುವ ಸಂಗತಿಯು ಚರ್ಚೆಯಾಗಿತ್ತು. ಒಟ್ಟಾರೆ, ಗಿಲ್​ ಸಚಿನ್​ ಅಳಿಯನಾಗ್ತಾನೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಹಿಂದೊಮ್ಮೆ ಸಾರಾ, ಗಿಲ್​ ಫೀಲ್ಡಿಂಗ್​ ಮಾಡುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಹೃದಯದ ಎಮೋಜಿ ಹಾಕಿದ್ದರು. ಬಳಿಕ ಪೋಸ್ಟ್​ ಡಿಲೀಟ್​ ಮಾಡಿದ್ದರೂ ಸಹ ಸ್ಕ್ರೀನ್​ಶಾಟ್ ವೈರಲ್​ ಆಗಿತ್ತು. ಇದಕ್ಕೂ ಮುಂಚೆ ಗಿಲ್​, ಹೊಸ​ ರೇಂಜ್​ ರೋವರ್​ ಕಾರು ಖರೀದಿಸಿದ್ದಾಗ ಸಾರಾ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts