ಡಿಸೆಂಬರ್​ನಲ್ಲಿ ಅಧಿವೇಶನ - ಬೆಂಗಳೂರಲ್ಲೋ? ಬೆಳಗಾವಿಯಲ್ಲೋ? ಇಂದು ನಿರ್ಧಾರ

Vidhan Soudha
Published on

ಬೆಂಗಳೂರು: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕರೊನಾ ಕಾರಣದಿಂದ ಈ ಬಾರಿಯ ಲೋಕಸಭೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಹಿಂದೇಟು ಹೊಡೆದಿದ್ದು, ಬಜೆಟ್ ಅಧಿವೇಶನವನ್ನು ಮುಂಚಿತವಾಗಿ ನಡೆಸಲು ಉದ್ದೇಶಿಸಿದೆ ಎನ್ನಲಾಗುತ್ತಿದೆ.

ಆದರೆ, ರಾಜ್ಯದಲ್ಲಿ ಕರೊನಾ ಪ್ರಕರಣ ಕಡಿಮೆ ಇರುವುದರಿಂದ ಮತ್ತು ಪ್ರಮುಖ ವಿಧೇಯಕಗಳಿಗೆ ಒಪ್ಪಿಗೆ ಪಡೆಯಬೇಕಿರುವುದರಿಂದ ಡಿಸೆಂಬರ್​ನಲ್ಲಿ ಅಧಿವೇಶನ ಕರೆಯಲು ಉದ್ದೇಶಿಸಿದೆ. ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿವೇಶನ ನಡೆಸುವ ಕುರಿತು ಸಂಪುಟ ಸದಸ್ಯರಿಂದ ಅಭಿಪ್ರಾಯ ಕೇಳಲಿದ್ದಾರೆ.

ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೊಳಗೆ ಅಧಿವೇಶನ ನಡೆಸಬೇಕೆಂಬ ಉದ್ದೇಶವಿದ್ದು, ಈ ಕಾರಣಕ್ಕೆ ಡಿಸೆಂಬರ್ ಎರಡನೇ ವಾರದ ಆರಂಭದಿಂದ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ಇದೆ. ಸಂಪುಟ ಸಭೆಯಲ್ಲಿ ದಿನಾಂಕದ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮ ನಿರ್ಧಾರವನ್ನು ಸಿಎಂ ಕೈಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net