

ಚಂಡಿಗಢ: ಅಕ್ಟೋಬರ್ 05ರಂದು ನಡೆದಿದ್ದ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ (Assembly Election Results) ನಡೆಯುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ಗೆ ಟಕ್ಕರ್ ನೀಡಿದೆ.
90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ (Haryana Assembly) ಸರ್ಕಾರ ರಚಿಸಲು 46 ಶಾಸಕರ ಅಗತ್ಯವಿದ್ದು, ಬಿಜೆಪಿ (BJP) 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 36 ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ನಿಖರ ಪೈಪೋಟಿ ನೀಡುತ್ತಿದೆ. ಜೆಜೆಪಿ (JJP)ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮುನ್ನಡೆ ಗಳಿಸಿತ್ತು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಯಾಚರಣೆ ಕೂಡ ಆರಂಭವಾಗಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಟ್ರೆಂಡ್ ಬದಲಾಗಿದ್ದು, ಬಿಜೆಪಿ ಮುನ್ನಡೆ ಗಳಿಸಿದೆ. ಆ ಮೂಲಕ ಹರಿಯಾಣದಲ್ಲಿ ಹಾವು-ಏಣಿ ಆಟ ಮುಂದುವರೆದಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಲೋಕಸಭೆಯ (Loksabha) ಬಳಿಕ ನಡೆಯುತ್ತಿರುವ ಮೊದಲ ರಾಜ್ಯ ವಿಧಾನಸಭೆ ಚುನಾವಣೆಯು(State Assembly Elections) ಮುಂಬರುವ ಮಹಾರಾಷ್ಟ್ರ (Maharashtra) ಹಾಗೂ ಜಾರ್ಖಂಡ್ (Jharkhand) ಎಲೆಕ್ಷನ್ಗೆ ದಿಕ್ಸೂಚಿಯಾಗಿದ್ದು, ಬಿಜೆಪಿ ನೇತೃತ್ವದ ಎನ್ಡಿಎಗೆ ಈ ಚುನಾವಣೆ ದೊಡ್ಡ ಅಗ್ನಿಪರೀಕ್ಷಯಾಗಿದೆ.