Virat Kohliಗಿಂತ ನಮ್ಮವರ ರೆಕಾರ್ಡ್ ಉತ್ತಮವಾಗಿದೆ; ಪಾಕ್​ ಕ್ರಿಕೆಟ್​ ತಂಡದ ನಾಯಕನ ಹೇಳಿಕೆ ವೈರಲ್​

Virat Kohli
Published on

ಮುಲ್ತಾನ್​: ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಹಾಗೂ ಹಾಲಿ ಆಟಗಾರರು ಟೀಮ್​ ಇಂಡಿಯಾದ (Team India) ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿ ತೀವ್ರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ವಿರಾಟ್​ ಕೊಹ್ಲಿ (Virat Kohli) ಬಗ್ಗೆ ಮಾತನಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗುವ ಪಾಕಿಸ್ತಾನಿಗಳು (Pakistanis) ಇದೀಗ ಮತ್ತೊಮ್ಮೆ ರನ್​ ಮೆಷಿನ್​ ಕುರಿತು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದು, ಈ ಹೇಳಿಕೆ ಭಾರತೀಯರ (Indians) ಕೆಂಗಣ್ಣಿಗೆ ಗುರಿಯಾಗಿದೆ.

ಮುಲ್ತಾನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡಯುತ್ತಿರುವ ಇಂಗ್ಲೆಂಡ್ (England)​ ಹಾಗೂ ಪಾಕಿಸ್ತಾನ (Pakistan) ನಡುವಿನ ಟೆಸ್ಟ್​ ಸರಣಿಯ (Test Series) ಮೊದಲ ಪಂದ್ಯದಲ್ಲಿ ಅಬ್ದುಲ್ಲಾ ಶಫಿಕ್ (Abdullah Shafique)​ ಶತಕ ಬಾರಿಸುವ ಮೂಲಕ ಫಾರ್ಮ್​ಗೆ ಮರಳಿದ್ದು, ಕೊಹ್ಲಿ ಅವರಿಗಿಂತ ಶಫಿಕ್​ ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಪಾಕ್​ ಕ್ರಿಕೆಟ್​ ತಂಡದ ನಾಯಕ ಶಾನ್​ ಮಸೂದ್​ ಹೇಳಿಕೆ ನೀಡಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಸ್ಟ್​ ತಂಡದ ನಾಯಕ ಶಾನ್​ ಮಸೂದ್(Shan Masood)​ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Shan Masood

ಕಳೆದ ಮೂರು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಅಬ್ದುಲ್ಲಾ ಶಫಿಕ್​ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್​ಗೆ ಮರಳಿದ್ದು, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಶಾನ್​ ಮಸೂದ್​, ನನ್ನ ಪ್ರಕಾರ ನೀವು ಕೇಳಿರುವ ಪ್ರಶ್ನೆ ನಿಖರವಾಗಿಲ್ಲ ಎಂದು ಭಾವಿಸುತ್ತೇನೆ. ಈ ವರ್ಷ ನಾವು ಚೆನ್ನಾಗಿ ಆಡಿಲ್ಲ ಎಂಬ ವಿಚಾರವನ್ನು ಒಪ್ಪಿಕೊಳ್ಳುತ್ತೇನೆ.

ವಿಷಯಗಳನ್ನು ವಸ್ತುನಿಷ್ಠವಾಗಿ ನೋಡಬೇಕಿದ್ದು, ಜನರು ಹೆಚ್ಚಾಗಿ ಅಂಕಿ ಅಂಶಗಳ ಬಗ್ಗೆ ಮಾತನಾಡುತ್ತಾರೆ. ನಾನು ಈ ಹಿಂದೆ ಪತ್ರಿಕೆಯಲ್ಲಿ ಒಂದನ್ನು ನೋಡುವಾಗ 19 ಟೆಸ್ಟ್​ ಪಂದ್ಯಗಳನ್ನು ಆಡಿರುವ ಅಬ್ದುಲ್ಲಾ ವಿರಾಟ್​ ಕೊಹ್ಲಿಗಿಂತ (Virat Kohli) ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂದು ಟೆಸ್ಟ್​ ತಂಡದ ನಾಯಕ ಶಾನ್​ ಮಸೂದ್​ ಹೇಳಿದ್ದಾರೆ. ಈ ಹೇಳಿಕೆ ಭಾರತೀಯ ಕ್ರೀಡಾಭಿಮಾನಿಗಳನ್ನು ಕೆರಳಿಸಿದ್ದು, ಪಾಕ್​ ಟೆಸ್ಟ್​ ತಂಡದ ನಾಯಕನ ವಿರುದ್ಧ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net