

ಉತ್ತರ ಪ್ರದೇಶ: ಎಂಎಲ್‌ಸಿ ಚುನಾವಣೆಯ ಮರು ಮತ ಎಣಿಕೆ ಸಂದರ್ಭದಲ್ಲಿ ಕರ್ತವ್ಯನಿರತ ಅಧಿಕಾರಿಗಳ ಹಲ್ಲೆ ನಡೆಸಿ, ಮತ ಯಂತ್ರಗಳನ್ನು ಲೂಟಿ ಮಾಡಿದ ಆರೋಪದಲ್ಲಿ ಇಬ್ಬರು ಮಾಜಿ ಶಾಸಕರಿಗೆ ಶಾಸಕರ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.
ಶಾಸಕರ ನ್ಯಾಯಾಲಯವು ಪ್ರಮುಖ ಆರೋಪಿಗಳಾದ ಸಂಜಯ್ ಜೈಸ್ವಾಲ್ ಹಾಗೂ ಆದಿತ್ಯ ವಿಕ್ರಮ ಸಿಂಗ್ರನ್ನು ದೋಷಿಗಳೆಂದು ತೀರ್ಪು ನೀಡಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಯಾದವ್, ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ತಲಾ 2,000 ರೂ.ದಂಡವನ್ನು ವಿಧಿಸಿದ್ದಾರೆ.
2003ರ ಎಂಎಲ್‌ಸಿ ಚುನಾವಣೆಯ ಸಂದರ್ಭದಲ್ಲಿ ಮತಗಳ ಮರು ಎಣಿಕೆ ವಿಚಾರವಾಗಿ ವಿವಾದ ಉಂಟಾದ ನಂತರ ಅಭ್ಯರ್ಥಿ ಕಾಂಚನಾ ಸಿಂಗ್ ಎಂಬುವರನ್ನು ಬೆಂಬಲಿಸುತ್ತಿದ್ದ ಕಾಂಗ್ರೆಸ್ ಮುಖಂಡ ಜೈಸ್ವಾಲ್ ಮತ್ತು ಅವರ ಆರು ಸಹಚರರು ಮತ ಎಣಿಕೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಮತಯಂತ್ರಗಳನ್ನು ಲೂಟಿ ಮಾಡಿದ್ದರು.(ಏಜೆನ್ಸೀಸ್)