ಲಾಕ್​ಡೌನ್​ ನೆನಪಿಸಿದ ಸೂರ್ಯ ಗ್ರಹಣ; ಮುಂದಿನ ಗ್ರಹಣ ಯಾವಾಗ ಗೊತ್ತೆ?

SolarEclipse watching center 25 DEC 19
Published on

ನವದೆಹಲಿ: ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಜನರು ಮನೆಯಿಂದ ಹೊರಗೆ ಬರುವುದು ವಿರಳವಾಗಿತ್ತು. ಇಡೀ ವಾತಾವರಣವನ್ನು ಗಮನಿಸಿದರೆ, ದೇಶದಲ್ಲಿ ಇಂದು ಮತ್ತೆ ಲಾಕ್​ಡೌನ್​ ಘೋಷಣೆಯಾದಂತೆ ಭಾಸವಾಗುತ್ತಿತ್ತು.

ರಾಜ್ಯದಲ್ಲಿ ಮಧ್ಯಾಹ್ನ 1.32ರ ವೇಳೆಗೆ ಸೂರ್ಯ ಗ್ರಹಣ ಮೋಕ್ಷವಾಗಿದೆ. ಜನರು ಮನೆಗಳಲ್ಲಿ ಪೂಜೆ ನೆರವೇರಿಸಿದ್ದಲ್ಲದೇ, ನಂತರ ದೇವಾಲಯಗಳಿಗೆ ಭೇಟಿ ನೀಡಿದರು.

ಮುಂದಿನ ಗ್ರಹಣಗಳು ಯಾವಾಗ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

* ಜುಲೈ 4-5 ರಂದು ಖಂಡಗ್ರಾಸ ಚಂದ್ರಗ್ರಹಣ

* ನವೆಂಬರ್​ 29-30- ಖಂಡಗ್ರಾಸ ಚಂದ್ರ ಗ್ರಹಣ

* ಡಿಸೆಂಬರ್​ 14- ಖಗ್ರಾಸ ಸೂರ್ಯ ಗ್ರಹಣ

2021ರಲ್ಲಿ ಸಂಭವಿಸಲಿರುವ ಗ್ರಹಣಗಳ ಮಾಹಿತಿ

* ಮೇ 26- ಚಂದ್ರ ಗ್ರಹಣ

* ಜೂನ್​ 10- ಸೂರ್ಯ ಗ್ರಹಣ

* ನವೆಂಬರ್​ 18-19- ಪಾರ್ಶ್ವ ಚಂದ್ರ ಗ್ರಹಣ

* ಡಿಸೆಂಬರ್​ 4 - ಖಗ್ರಾಸ ಸೂರ್ಯ ಗ್ರಹಣ

ಈ ಗ್ರಹಣಗಳಲ್ಲಿ ಬಹುತೇಕವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಮುಂದಿನ ನವೆಂಬರ್​ 29-30 ರಂದು ಸಂಭವಿಸಲಿರುವ ಖಂಡಗ್ರಾಸ ಚಂದ್ರಗ್ರಹಣವು ಏಷ್ಯಾದ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಗೋಚರಿಸಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net