More

    ಪ್ರಧಾನಿಯನ್ನೇ ಟೀಕಿಸಿ, ಚೀನಿಯರ ಸುಳ್ಳು ಮೆಚ್ಚಿದ ಕಾಂಗ್ರೆಸ್​ ಸಂಸದ ಶಶಿ ತರೂರ್​?

    ನವದೆಹಲಿ: ಭಾರತ ಚೀನಾ ನಡುವಿನ ಸಂಘರ್ಷದಲ್ಲಿ ಚೀನಾದ ಯಾವುದೇ ಯೋಧರು ಮೃತಪಟ್ಟಿಲ್ಲ. ಕೇವಲ ಐವರು ಮಾತ್ರ ಗಾಯಗೊಂಡಿದ್ದಾರೆ. ಗಾಯಾಳುಗಳಾಗಿದ್ದ ಭಾರತೀಯ ಯೋಧರಿಗೆ ಚೀನಿಯರೇ ಆಮ್ಲಜನಕ ಪೂರೈಸಿದ್ದಾರೆ. ರಾತ್ರಿಯಿಡೀ ಕೊರೆವ ಚಳಿಯಲ್ಲಿ ಭಾರತೀಯ ಯೋಧರು ಇದ್ದಿದ್ದರಿಂದ ಆಮ್ಲಜನಕದ ಕೊರತೆ ಉಂಟಾಗಿ ಮೃತಪಟ್ಟಿದ್ದಾರೆ…..!

    ಇಂಥದ್ದೊಂದು ಉಲ್ಲೇಖವಿರುವ ಚೀನಿ ಟ್ವೀಟ್​ವೊಂದು ಹರಿದಾಡುತ್ತಿದೆ. ಇವಾ ಜೆಂಗ್​ ಎಂಬಾಕೆ ಇದನ್ನು ಪೋಸ್ಟ್​ ಮಾಡಿದ್ದಾರೆ. ಇಷ್ಟಾಗಿದ್ದರೆ, ಚೀನಿಯರು ತಮ್ಮವರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ ಎಂದುಕೊಳ್ಳಬಹುದಿತ್ತೇನೋ? ಭಾರತದಲ್ಲೂ ಈ ಟ್ವೀಟ್​ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ ಶಶಿ ತರೂರ್​.

    ಇದನ್ನೂ ಓದಿ; ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

    ಚೀನಿಯರು ಭಾರತೀಯ ಯೋಧರಿಗೆ ಆಮ್ಲಜನಕ ನೀಡಿ ರಕ್ಷಿಸಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಎಂಥವರಿಗೂ ಗೊತ್ತಾಗುತ್ತದೆ. ಆದರೆ, ಇದು ಶಶಿ ತರೂರ್​ಗೆ ಗೊತ್ತಾಗಲಿಲ್ಲವೇ ಎಂಬುದು ಪ್ರಶ್ನೆ. ಏಕೆಂದರೆ, ಇದು ದೇಶದಲ್ಲಿ ಮಿಂಚಿನ ಹರಿದಾಡಲು ಕಾರಣವಾಗಿರುವುದು ಶಶಿ ತರೂರ್​ ಇದನ್ನು ಲೈಕ್​ ಮಾಡಿದ್ದಾರೆ ಎಂಬ ಕಾರಣಕ್ಕೆ.

    ಭಾರತೀಯ ಪ್ರದೇಶದಲ್ಲಿ ಚೀನಿಯರು ಅತಿಕ್ರಮಣ ನಡೆಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿದ್ದ ತರೂರ್​ ಚೀನಾದ ಸುಳ್ಳು ವಾದವನ್ನು ಅಂಧರಾಗಿ ಬೆಂಬಲಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವಾ ಮೂರು ವರ್ಷಗಳ ಹಿಂದಿನ ವಿಡಿಯೋವನ್ನು ಪೋಸ್ಟ್​ ಮಾಡಿ, ಸುಳ್ಳು ಸುದ್ದಿ ಹರಡಿದ್ದಾಳೆ ಎಂಬುದು ಬಹಿರಂಗವಾಗಿದೆ. ಅಂಥ ಸುದ್ದಿಯನ್ನೇಕೆ ಶಶಿ ತರೂರ್​ ಬೆಂಬಲಿಸಿದರು ಎನ್ನುವುದು ಅಚ್ಚರಿಯ ಪ್ರಶ್ನೆ.

    ಇದನ್ನೂ ಓದಿ; ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು

    ಆದರೆ, ಚೀನಾದ ಟ್ವಿಟರ್​ ಹ್ಯಾಂಡಲ್​ನಿಂದ ಸದ್ಯ ಈ ಟ್ವೀಟ್​ಅನ್ನು ಅಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಪ್ರಧಾನಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್​ಗೆ ಇದು ಭಾರಿ ಮುಜುಗರ ಉಂಟು ಮಾಡಿದೆ.

    ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts