ದೋಹಾದಲ್ಲಿ ಕಲಾವಿದೆ ಅಪರ್ಣ ಮೆನನ್ ಭರತನಾಟ್ಯ ಪ್ರದರ್ಶನ

Aparna
Published on

ದೋಹಾ: ಖ್ಯಾತ ಭರತನಾಟ್ಯ ಕಲಾವಿದೆ, ವಿದುಷಿ ಅಪರ್ಣ ವಿನೋದ ಮೆನನ್ ಅವರು ದೋಹಾದಲ್ಲಿ ತಮ್ಮ ಅದ್ಭುತ ನೃತ್ಯವನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು.

ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಆಶ್ರಯದಲ್ಲಿ ಪ್ರತಿವಾರ ಜರುಗುವ ಸಂಭ್ರಮದ "ಬುಧವಾರದ ಹಬ್ಬ" ಕಾರ್ಯಕ್ರಮದ ಪ್ರಯುಕ್ತ ಈ ನೃತ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ದೋಹಾ ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಜೂ. 14ರಂದು ಈ ಕಾರ್ಯಕ್ರಮ ನಡೆಯಿತು.

ತಾಯ್ನಾಡಿನಿಂದ ಆಗಮಿಸಿದ್ದ ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಅಪರ್ಣ ವಿನೋದ ಮೆನನ್ ಅವರು ನೆರೆದ ಪ್ರೇಕ್ಷಕರನ್ನು ತಮ್ಮ ಅದ್ಭುತ ನೃತ್ಯಗಳ ಮೂಲಕ ಮನಸೊರೆಗೊಂಡರು. ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠ, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಸಮಿತಿಯ ಸದಸ್ಯರು ಪಾಲ್ಗೊಂಡು ಯಶಸ್ವಿಗೊಳಿಸಿದರು. ಕತಾರ್​ನಲ್ಲಿ ನೆಲೆಸಿರುವ ಭಾರತೀಯ ಕಲಾಭಿಮಾನಿಗಳಿಗಾಗಿ ಪ್ರತಿ ಬುಧವಾರ ಪ್ರಸಿದ್ಧ ಕಲಾವಿದರಿಂದ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net