ಕಂಗನಾ ಬಂಧನಕ್ಕೆ ಒತ್ತಾಯ; ಅವಳ ತಪ್ಪಿದ್ರೆ, ಇಂಡಸ್ಟ್ರಿಯನ್ನೇ ಶಾಶ್ವತವಾಗಿ ಬಿಡ್ತಾಳೆ: ಟೀಮ್​ ಕಂಗನಾ

Kangana Arrest
Published on

#ArrestKanganaRanaut ಹೀಗೊಂದು ಹ್ಯಾಷ್​​ಟ್ಯಾಗ್​ ಅಭಿಯಾನ ಇವತ್ತು ದಿನವಿಡಿ ಟ್ರೆಂಡಿಂಗ್​ನಲ್ಲಿದೆ. ಈ ಮೂಲಕ ಕಂಗನಾ ಬಂಧನಕ್ಕೆ ಸಾಕಷ್ಟು ಮಂದಿ ಬೇಡಿಕೆ ಇಟ್ಟಿದ್ದಾರೆ.

ಸುಶಾಂತ್​ ಸಿಂಗ್​ ಸಾವನ್ನಪ್ಪಿದ ಮೇಲೆ ಹೆಚ್ಚು ಸುದ್ದಿಯಲ್ಲಿರುವವರು ಕಂಗನಾ. ನಿತ್ಯ ಒಂದಲ್ಲ ಒಂದು ಕಿರಿಕ್​ ಮಾಡಿಕೊಂಡು, ಅವರಿವರ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತ ಬಾಲಿವುಡ್​ನ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಇದೆಲ್ಲವನ್ನು ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಅರೆಸ್ಟ್ ಕಂಗನಾ ರಣಾವತ್​ ಎಂದು ಟ್ರೆಂಡ್​ ಮಾಡಲಾಗುತ್ತಿದೆ. ಇದೀಗ ಈ ಟ್ರೆಂಡ್​ ಬಗ್ಗೆ ಸ್ವತಃ ಕಂಗನಾ ಟೀಮ್​ ಪ್ರತಿಕ್ರಿಯೆ ನೀಡಿದೆ.

‘ಹಿಂದಿನಿಂದ ಕಂಗನಾ ಮೇಲೆ ಹಲ್ಲೆ ನಡೆಸಿ ಅವಳ ವಿರುದ್ಧ ಪಿತೂರಿ ನಡೆಸುವ ಬದಲು ಎದುರಿಗೆ ಬಂದು ನಿಂತು ಆಕೆ ಮಾಡಿದ ಒಂದೇ ಒಂದು ತಪ್ಪನ್ನು ಸಾಕ್ಷಿ ಸಮೇತ ಹಾಜರುಪಡಿಸಿ. ಅಥವಾ ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರುಪಡಿಸಿ, ಆಗಲಾದರೂ ಸತ್ಯ ಹೊರಬರಲಿದೆ. ಒಂದು ವೇಳೆ ಕಂಗನಾ ಗೆದ್ದರೆ, ಹಾಲು ಕುಡಿಯೊ ಚಿಂಗು ಮಿಂಗು ಗ್ಯಾಂಗ್​ಗೆ ಶಿಕ್ಷೆಯಾಗಲಿ. ಕಂಗನಾ ತಪ್ಪಿದ್ರೆ, ಆಕೆ ಶಾಶ್ವತವಾಗಿ ಇಡೀ ಇಂಡಸ್ಟ್ರಿಯನ್ನೇ ಕೈ ಬಿಡಲು ಸಿದ್ದ. ನೀವು ತಯಾರಿದ್ದೀರಾ’ ಎಂದು ಕಂಗನಾ ಟೀಮ್ ಪ್ರತ್ಯುತ್ತರ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net