

ನವದೆಹಲಿ: ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಕೇರಳದ ಎರ್ನಾಕುಲಂನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು ಒಂಭತ್ತು ಅಲ್ಕೈದಾ ಉಗ್ರರನ್ನು ಬಂಧಿಸಿದೆ. ಈ ಪೈಕಿ ಮೂವರನ್ನು ಕೇರಳದಿಂದಲೂ, ಆರು ಉಗ್ರರನ್ನು ಪಶ್ಚಿಮ ಬಂಗಾಳದಿಂದಲೂ ಬಂಧಿಸಲಾಗಿದೆ.
ಬಂಧಿತರನ್ನು ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್, ಮೊಸಾರಫ್ ಹೊಸೇನ್ ಅವರನ್ನು ಎರ್ನಾಕುಲಂನಿಂದಲೂ, ನಜ್ಮಸ್ ಸಾಕಿಬ್, ಅಬು ಸುಫಿಯಾನ್, ಮೈನುಲ್ ಮೊನ್ಡಲ್, ಲಿಯೂ ಯೀನ್ ಅಹ್ಮದ್, ಅಲ್ ಮಮುನ್ ಕಮಲ್, ಅತಿತುರ್ ರೆಹ್ಮಾನ್ನನ್ನು ಮುರ್ಷಿದಾಬಾದ್ನಿಂದಲೂ ಬಂಧಿಸಲಾಗಿದೆ. ಬಂಧಿತರನ್ನು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿನ ಸಂಬಂಧಿತ ಕೋರ್ಟ್ಗಳಲ್ಲಿ ಹಾಜರುಪಡಿಸಲಾಗುತ್ತಿದೆ ಎಂದು ಎನ್ಐಎ ತಿಳಿಸಿದೆ.
ರಾಷ್ಟ್ರ ರಾಜಧಾನಿ ಮತ್ತು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸುವುದಕ್ಕೆ ಪ್ರಚೋದಿತರಾಗಿದ್ದರು. ಈ ಉಗ್ರರ ತಂಡ ಫಂಡ್ ರೈಸಿಂಗ್ ನಲ್ಲಿ ಸಕ್ರಿಯವಾಗಿತ್ತು ಅಲ್ಲದೆ, ಕೆಲವು ಸದಸ್ಯರ ತಂಡ ದೆಹಲಿಗೆ ತೆರಳಿ ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಪಿತೂರಿ ರೂಪಿಸಿಕೊಂಡಿತ್ತು ಎಂಬ ಅಂಶ ತನಿಖೆ ವೇಳೆ ಬಹಿರಂಗಗೊಂಡಿದೆ. (ಏಜೆನ್ಸೀಸ್)