ಡ್ರಗ್ಸ್ ನಂಟು- ಮಂಗಳೂರಿನಲ್ಲಿ ನಟ ಕಿಶೋರ್ ಅಮನ್​ ಶೆಟ್ಟಿ ಅರೆಸ್ಟ್

Kirshore Shetty
Published on

ಮಂಗಳೂರು: ಸಿನಿಮಾ ನಂಟಿನ ಡ್ರಗ್ಸ್ ಜಾಲ ದೇಶವ್ಯಾಪಿ ಹರಡಿದ್ದು, ಮಂಗಳೂರಿನಲ್ಲಿ ಬಾಲಿವುಡ್​ನ ಉದಯೋನ್ಮುಖ ನಟ ಕಿಶೋರ್ ಅಮನ್ ಶೆಟ್ಟಿಯನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಸಾಗಾಟದ ಕಾರಣಕ್ಕೆ ಈತನನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಈತನ ಚಲನವಲನದ ಬಗ್ಗೆ ತೀವ್ರ ನಿಗಾ ಇರಿಸಿದ್ದ ಪೊಲೀಸರು, ಈತನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಬಂಧನಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳು ಲಭ್ಯವಾಗಬೇಕಷ್ಟೆ.

ಕಿಶೋರ್ ಅಮನ್ ಶೆಟ್ಟಿ ಯುವ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದು, ಎರಡನೇ ಆವೃತ್ತಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಶೋ ಮೂಲಕ ಜನಪ್ರಿಯತೆ ಗಳಿಸಿದಾತ. ಬಾಲಿವುಡ್​ನ ಎಬಿಸಿಡಿ ಸಿನಿಮಾದಲ್ಲಿ ನಟಿಸಿದ್ದ. ಹತ್ತನೇ ಕ್ಲಾಸ್ ವರೆಗೆ ಓದಿದ ಕಿಶೋರ್ ಮತ್ತು ಆತನ ಮೂವರು ಸಹೋದರರನ್ನು ತಾಯಿಯೇ ಸಾಕಿ ಬೆಳೆಸಿದ್ದು. ಸ್ವತಃ ಪರಿಶ್ರಮದಿಂದ ಡ್ಯಾನ್ಸರ್ ಆಗಿ ಬೆಳೆದ ವಿಚಾರವನ್ನು ನೆಟ್​ವಿ4ಯು ಎಂಬ ಜಾಲತಾಣದಲ್ಲಿನ ಲೇಖನ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net