More

    9 ಅಲ್​ಕೈದಾ ಉಗ್ರರ ಸೆರೆ- ಕೇರಳ, ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಎನ್​ಐಎ ವಿಶೇಷ ಕಾರ್ಯಾಚರಣೆ

    ನವದೆಹಲಿ: ಅಲ್ ಕೈದಾ ಉಗ್ರ ಗುಂಪಿಗೆ ಸೇರಿದ 9 ಉಗ್ರರನ್ನು ನ್ಯಾಷನಲ್​ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ದೇಶದ ವಿವಿಧೆಡೆ ದಾಳಿ ನಡೆಸಿ ಬಂಧಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್​, ಕೇರಳದ ಎರ್ನಾಕುಲಂನಲ್ಲಿ ನಡೆಸಲಾದ ದಾಳಿಯಲ್ಲಿ ಇವರನ್ನು ಬಂಧಿಸಲಾಗಿದೆ.

    ಬಂಧಿತರ ಬಳಿ ಇದ್ದ ಡಿಜಿಟಲ್ ಉಪಕರಣ, ಡಾಕ್ಯುಮೆಂಟ್ಸ್​, ಜಿಹಾದಿ ಸಾಹಿತ್ಯ, ಹರಿತ ಆಯುಧಗಳು, ಕಂಟ್ರಿ ಮೇಡ್ ಶಸ್ತ್ರಾಸ್ತ್ರಗಳು, ಸ್ಥಳೀಯವಾಗಿ ನಿರ್ಮಿಸಿದ ಬಾಡಿ ಆರ್ಮರ್, ಮನೆಯಲ್ಲೇ ಸ್ಫೋಟಕ ತಯಾರಿಸುವ ಮಾರ್ಗದರ್ಶಿ ಪುಸ್ತಕಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಆರು ಉಗ್ರರನ್ನು ಪಶ್ಚಿಮ ಬಂಗಾಳ, ಮೂವರನ್ನು ಕೇರಳದಿಂದ ಬಂಧಿಸಲಾಗಿದೆ ಎಂದು ಎನ್​ಐಎ ತಿಳಿಸಿದೆ.

    ಇದನ್ನೂ ಓದಿ: ಒಂದೇ ಒಂದು ಕೂದಲನ್ನೂ ಕೊಂಕಿಸೋಕೆ ಆಗಲ್ಲ, ಏನೂ ಬಹಿರಂಗವಾಗಲ್ಲ- ಕೇರಳ ಸಚಿವ ಕೆ.ಟಿ.ಜಲೀಲ್

    ಪ್ರಾಥಮಿಕ ತನಿಖೆ ವೇಳೆ, ಈ ಉಗ್ರರನ್ನು ಪಾಕಿಸ್ಥಾನ ಮೂಲದ ಅಲ್​ ಕೈದಾ ಉಗ್ರ ಸಂಘಟನೆ ಸೋಷಿಯಲ್ ಮೀಡಿಯಾ ಮೂಲಕ ನೇಮಕ ಮಾಡಿಕೊಂಡಿದೆ. ರಾಷ್ಟ್ರ ರಾಜಧಾನಿ ಮತ್ತು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸುವುದಕ್ಕೆ ಪ್ರಚೋದಿತರಾಗಿದ್ದರು. ಈ ಉಗ್ರರ ತಂಡ ಫಂಡ್ ರೈಸಿಂಗ್ ನಲ್ಲಿ ಸಕ್ರಿಯವಾಗಿತ್ತು ಅಲ್ಲದೆ, ಕೆಲವು ಸದಸ್ಯರ ತಂಡ ದೆಹಲಿಗೆ ತೆರಳಿ ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಪಿತೂರಿ ರೂಪಿಸಿಕೊಂಡಿತ್ತು. ಈ ಉಗ್ರರ ಬಂಧನದಿಂದಾಗಿ ಸಂಭಾವ್ಯ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಎನ್​ಐಎ ಹೇಳಿದೆ. (ಏಜೆನ್ಸೀಸ್)

    ಆರೆಸ್ಸೆಸ್ ಶಕ್ತಿ ಕೇಂದ್ರ ನಾಗಪುರದಲ್ಲಿ 9 ಹಿರಿಯ ಆರೆಸ್ಸೆಸ್ ನಾಯಕರಿಗೆ ಕರೋನಾ, ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts