ಆರೆಸ್ಸೆಸ್ ಶಕ್ತಿ ಕೇಂದ್ರ ನಾಗಪುರದಲ್ಲಿ 9 ಹಿರಿಯ ಆರೆಸ್ಸೆಸ್ ನಾಯಕರಿಗೆ ಕರೋನಾ, ಆಸ್ಪತ್ರೆಗೆ ದಾಖಲು

RSS HQ Nagpura
Published on

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಶಕ್ತಿ ಕೇಂದ್ರ ನಾಗಪುರದ ಕೇಂದ್ರ ಕಚೇರಿಯಲ್ಲಿ ಕನಿಷ್ಠ 9 ಹಿರಿಯ ನಾಯಕರಿಗೆ ಕರೋನಾ ಸೋಂಕು ತಗುಲಿದೆ. ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದ ಕಾರಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲರೂ ಪೂರ್ಣಾವಧಿ ಕಾರ್ಯಕರ್ತರಾಗಿದ್ದು, ಬಹುತೇಕರು 60 ವರ್ಷ ಮತ್ತು ಮೇಲ್ಪಟ್ಟವರು. ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಕಳವಳ ಪಡುವಂಥ ವಿಚಾರವೇನೂ ಇಲ್ಲ ಎಂದು ಸ್ವಯಂಸೇವಕರು ತಿಳಿಸಿದ್ದಾಗಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಆರೆಸ್ಸೆಸ್​ ಮುಖ್ಯಸ್ಥ ಮೋಹನ ಭಾಗವತ್​ , ಜನರಲ್ ಸೆಕ್ರೆಟರಿ ಭೈಯಾಜಿ ಜೋಶಿ ಇಬ್ಬರದ್ದೂ ಕೇಂದ್ರ ಸ್ಥಾನ ಇದೇ ಆಗಿದ್ದರೂ, ಅವರು ಪ್ರವಾಸದಲ್ಲಿದ್ದಾರೆ. ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸೋಂಕಿತರೆಲ್ಲರೂ ಅಸಿಮ್ಟಮ್ಯಾಟಿಕ್ ಆಗಿದ್ದು, ಔಷಧೋಪಚಾರ ನಡೆಯುತ್ತಿದೆ. ಇದೇ ವೇಳೆ ಕೇಂದ್ರ ಕಚೇರಿ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಗರಿಷ್ಠ ಮಟ್ಟದ ಮುತುವರ್ಜಿ ತೆಗೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net