More

    ಒಂದೇ ಒಂದು ಕೂದಲನ್ನೂ ಕೊಂಕಿಸೋಕೆ ಆಗಲ್ಲ, ಏನೂ ಬಹಿರಂಗವಾಗಲ್ಲ- ಕೇರಳ ಸಚಿವ ಕೆ.ಟಿ.ಜಲೀಲ್

    ಕೊಚ್ಚಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ 8 ತಾಸು ಎನ್​ಐಎ ವಿಚಾರಣೆ ಎದುರಿಸಿದ ಹೊರಬಂದ ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್​, ಯಾವುದೇ ತನಿಖಾ ಏಜೆನ್ಸಿ ಬೇಕಾದ್ರೂ ನನ್ನನ್ನು ವಿಚಾರಣೆಗೊಳಪಡಿಸಲಿ, ಏನೂ ಬಹಿರಂಗವಾಗಲ್ಲ. ನನ್ನ ಒಂದೇ ಒಂದು ಕೂದಲನ್ನು ಕೊಂಕಿಸೋಕೆ ಆಗಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಯಾರ ಬಗ್ಗೆಯೂ, ಯಾವ ಆಪಾದನೆಗಳ ಬಗ್ಗೆಯೂ ನಾನು ಗಮನಹರಿಸುವುದಿಲ್ಲ. ನನ್ನ ದಾರಿ ನನ್ನದು. ನಾನು ಮುನ್ನಡೆಯುತ್ತಿರುತ್ತೇನೆ. ಬಹಿರಂಗಪಡಿಸೋದಕ್ಕೆ ಏನೂ ಮುಚ್ಚಿಟ್ಟಿಲ್ಲ. ಹೀಗಾಗಿ ರಹಸ್ಯವೇನೂ ಇಲ್ಲ. ಇಷ್ಟಕ್ಕೂ ನನ್ನ ಬಳಿ ಇರುವುದು 19.5 ಸೆಂಟ್​ ಜಮೀನು, ಅದರ ಮೇಲೆ ತೆಗೆದಿರೋ 5 ಲಕ್ಷ ರೂಪಾಯಿ ಸಾಲ. ವೇತನದ ಹೊರತಾಗಿ ಬೇರಾವ ಆದಾಯೂ ಇಲ್ಲದ, ಒಂದು ವಾಹನ ಅಥವಾ ಒಂದು ಪವನ್ ಚಿನ್ನವೂ ಇಲ್ಲದ ನಾನೇಕೆ ಹೆದರಲಿ, ಯಾರಿಗೆ ಹೆದರಲಿ? ಎಂದು ಜಲೀಲ್​ ಫೇಸ್​ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಸೈಬರ್ ಶಾಕ್: ಮತ್ತೆ ಟಾರ್ಗೆಟ್ ಪ್ರಧಾನಿ? ಚೀನಾ ಮೇಲೆ ಗುಮಾನಿ

    ವಿಚಾರಣೆ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಎನ್​ಐಎ ನನಗೆ ನೀಡಿದ್ದು “ನೋಟಿಸ್ ಟು ವಿಟ್ನೆಸ್​” ಎಂಬ ನೆಲೆಯಲ್ಲಿ. ಅದನ್ನು ಅವರು ಕ್ರಿಮಿನಲ್ ಪ್ರೊಸೀಜರ್ ಕೋಡ್​ನ ಸೆಕ್ಷನ್ 160ರ ಪ್ರಕಾರ ನೀಡಿದ್ದು, ಮಾಧ್ಯಮಗಳು ಅದನ್ನು ತಪ್ಪಾಗಿ ಬಿಂಬಿಸಿವೆ. ಅದು ನನಗೆ ಬುಧವಾರ ರಾತ್ರಿ 8 ಗಂಟೆಗೆ ಸಿಕ್ಕಿತ್ತು ಎಂದು ಸಮಜಾಯಿಷಿ ನೀಡಿದ್ದರು. (ಏಜೆನ್ಸೀಸ್)

    ಪ್ರಮುಖ ರೈಲ್ವೆ ಸ್ಟೇಷನ್ಸ್​ನಲ್ಲಿ ಬಳಕೆದಾರರ ಶುಲ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts