More

    ಪಶ್ಚಿಮ ಬಂಗಾಳದಲ್ಲಿ ಎನ್​ಐಎ ತಂಡದ ಮೇಲೆಯೇ ದಾಳಿ: ಓರ್ವ ಅಧಿಕಾರಿಯ ಸ್ಥಿತಿ ಗಂಭೀರ

    ಚಂಡೀಗಢ: ಬಾಂಬ್​ ಸ್ಪೋಟ ಪ್ರಕರಣದ ತನಿಖೆಗೆಂದು ತೆರಳಿದ್ದ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತಂಡದ ಮೇಲೆಯೆ ಜನರ ಗುಂಪೊಂದು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಈಸ್ಟ್​ ಮೆದಿನಿಪುರದ ಭೂಪಿತಾನಿನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಈ ದಾಳಿಯಲ್ಲಿ ಎನ್​ಐಎ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

    ಭೂಪಿತಾನಿನಗರದಲ್ಲಿ ನಡೆದ ಬಾಂಬ್​ ಸ್ಪೋಟ ಪ್ರಕರಣದ ತನಿಖೆಗಾಗಿ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಈ ಏರಿಯಾದಲ್ಲಿ ಶೋಧ ಕಾರ್ಯಾಚರಣೆ ನಡೆಸುವಾಗ ಇದ್ದಕ್ಕಿದ್ದಂತೆ ಒಂದು ಗುಂಪು ದಿಢೀರನೇ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ಅಧಿಕಾರಿಗಳ ವಾಹನ ಜಖಂಗೊಂಡಿದೆ.

    ಹಲವಾರು ಪುರುಷರು ಮತ್ತು ಮಹಿಳೆಯರು ಪೊಲೀಸ್ ವಾಹನವನ್ನು ತಡೆದು ಪೊಲೀಸರನ್ನು ಹಿಂತಿರುಗಿ ಹೋಗುವಂತೆ ಕೂಗುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಮಹಿಳೆಯರು ಕೈಯಲ್ಲಿ ಬಿದಿರು ಕೋಲುಗಳನ್ನು ಹಿಡಿದುಕೊಂಡು ಭದ್ರತಾ ಸಿಬ್ಬಂದಿಯ ಮುಂದೆ ರಸ್ತೆಯಲ್ಲಿ ಕುಳಿತಿರುವ ದೃಶ್ಯವು ಸಹ ವಿಡಿಯೋದಲ್ಲಿದೆ.

    ಈ ದಾಳಿಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮೊದಲೇ ಮಾಹಿತಿ ನೀಡಲಾಗಿತ್ತು, ಆದರೂ ಸರಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿಲ್ಲ ಎಂದು ಎನ್​ಐಎ ಮೂಲ ತಿಳಿಸಿದೆ. ಆದಾಗ್ಯೂ, ಪೊಲೀಸ್ ಮೂಲಗಳ ಪ್ರಕಾರ, ಎನ್ಐಎ ತಂಡವು ಬೆಳಿಗ್ಗೆ 5.30 ಕ್ಕೆ ಭೂಪಿತಾನಿನಗರಕ್ಕೆ ಹೋದರು. ಅವರು ಹೇಳಿದ್ದ ಸಮಯಕ್ಕೂ ಮುಂಚೆಯೇ ಹೋಗಿದ್ದರಿಂದ ಈ ಘಟನೆಯನ್ನು ತಡೆಯಲು ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಓರ್ವ ಮನಬೇಂದ್ರ ಜನ ಎಂಬಾತ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎನ್‌ಐಎ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಸ್ಫೋಟ ಪ್ರಕರಣದಲ್ಲಿ ಮನಬೇಂದ್ರ ಜನನನ್ನು ಬಂಧಿಸಲು ಭಯೋತ್ಪಾದನಾ ನಿಗ್ರಹ ಸಂಸ್ಥೆ ಭೂಪಿತಾನಿನಗರಕ್ಕೆ ತೆರಳಿತ್ತು.

    ಭೂಪಿತಾನಿನಗರ ಸ್ಫೋಟವು 2022ರ ಡಿಸೆಂಬರ್‌ನಲ್ಲಿ ಭೂಪತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾರ್ಯಬಿಲಾ ಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಮನೆಯಲ್ಲಿ ನಡೆದಿದ್ದು, ಮೂವರು ಸಾವಿಗೀಡಾಗಿದ್ದರು. ಈ ಪ್ರಕರಣದ ತನಿಖೆಯನ್ನು 2023ರ ಜೂನ್ ತಿಂಗಳಲ್ಲಿ ಎನ್​ಐಎ ಕೈಗೆತ್ತಿಕೊಂಡಿತ್ತು.

    ಜನವರಿ 5 ರಂದು ಬಂಗಾಳದ ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯದ (ED) ತಂಡದ ಮೇಲೆ ದಾಳಿ ನಡೆದ ಎರಡು ತಿಂಗಳ ನಂತರ ಎನ್​ಐಎ ತಂಡದ ಮೇಲೆ ದಾಳಿ ನಡೆದಿದೆ. ಉಚ್ಛಾಟಿತ ಟಿಎಂಸಿ ನಾಯಕ ಶೇಖ್ ಷಹಜಹಾನ್ ವಿಚಾರಣೆಗೆ ತೆರಳಿದ್ದ ವೇಳೆ ದಾಳಿಯಾಗಿತ್ತು. ಈ ವೇಳೆ ಷಹಜಹಾನ್​ ಪರಾರಿಯಾಗಿದ್ದ. ಸುಮಾರು ಎರಡು ತಿಂಗಳ ಬಳಿಕ ಆತನನ್ನು ಬಂಧಿಸಲಾಯಿತು. ಜನವರಿ 5 ರಂದು ಇಡಿ ತಂಡದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅವರ ಭದ್ರತಾ ಸಿಬ್ಬಂದಿ ಮತ್ತು ಅವರ ಸಹೋದರ ಸೇರಿದಂತೆ ಅವರ ಕೆಲವು ಸಹಚರರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. (ಏಜೆನ್ಸೀಸ್​)

    ಭಯೋತ್ಪಾದಕರ ಎದೆಯಲ್ಲಿ ನಡುಕ! ಓಡಿ ಹೋದ ಉಗ್ರರನ್ನು ಸೆದೆಬಡಿಯಲು ಪಾಕಿಸ್ತಾನಕ್ಕೆ ನುಗ್ಗಲಿದೆ ಭಾರತ

    ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದವರು ಕಾಲಿಗೆ ಗೋಣಿ ಚೀಲ ಕಟ್ಟಿಕೊಳ್ಳಬೇಕು! ಕಾರಣ ಹೀಗಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts