ಶ್ರೀನಿವಾಸಪ್ರಸಾದ್ ಆದರ್ಶ ಗುಣಗಳು ಸಮಾಜಕ್ಕೆ ಮಾದರಿ

1 Min Read
ಶ್ರೀನಿವಾಸಪ್ರಸಾದ್ ಆದರ್ಶ ಗುಣಗಳು ಸಮಾಜಕ್ಕೆ ಮಾದರಿ
ಸಾಲಿಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀನಿವಾಸಪ್ರಸಾದ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಭಾಕರ್, ರಾಂಪುರ ಲೋಕೇಶ್, ಸಂತೋಷ್ ಡಿ.ದೇವರಾಜ್, ಗಜೇಂದ್ರ, ಮುದುಗುಪ್ಪೆ ಮಾದೇವ್, ತಂದ್ರೆ ಧರ್ಮ ಇತರರಿದ್ದರು.

ಸಾಲಿಗ್ರಾಮ: ಶ್ರೀನಿವಾಸಪ್ರಸಾದ್ ಸರಳ ಸಜ್ಜನಿಕೆಯ ಸ್ವಾಭಿಮಾನದ ವ್ಯಕ್ತಿಯಾಗಿದ್ದು ಅವರ ಆದರ್ಶ ಗುಣಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸದ ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸಜ್ಜನ, ನೇರ, ನಿಷ್ಠುರ ರಾಜಕಾರಣಿಯಾಗಿದ್ದ ಅವರು ದಲಿತರ ಧ್ವನಿಯಾಗಿದ್ದರು. ತುಳಿತಕ್ಕೆ ಒಳಗಾದವರ ಪರ ನಿಲ್ಲುತ್ತಿದ್ದರು. ಅಂಬೇಡ್ಕರ್ ತತ್ವಾದರ್ಶಗಳನ್ನು ರೂಢಿಸಿಕೊಂಡು ಯುವಕರು ಅವರಂತೆಯೇ ಮುನ್ನಡೆಯುವಂತೆ ಸದಾ ಹೇಳುತ್ತಿದ್ದರು ಎಂದು ಸ್ಮರಿಸಿದರು.

ದಲಿತ ಮುಖಂಡ ರಾಂಪುರ ಲೋಕೇಶ್ ಮಾತನಾಡಿ, ಶ್ರೀನಿವಾಸಪ್ರಸಾದ್ ದಲಿತ ಸಮಾಜದ ಪ್ರಭಾವಿ ನಾಯಕರು. ಅವರನ್ನು ಕಳೆದುಕೊಂಡಿರುವುದು ಸಮಾಜಕ್ಕೆ ದೊಡ್ಡ ನಷ್ಟವಾದಂತಾಗಿದೆ. ಆದರೆ ಅವರ ಆದರ್ಶಗಳನ್ನ ಎಲ್ಲರಿಗೂ ಸಾರಿ ಹೋಗಿದ್ದಾರೆ. ಆ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅವರ ವ್ಯಕ್ತಿತ್ವದಂತೆ ನಾವೂ ಸಮಾಜ ಸೇವೆ ಮಾಡೋಣ. ಇತ್ತೀಚಿನ ರಾಜಕೀಯ ಬೆಳವಣಿಗೆಗೆ ತಕ್ಕಂತೆ ಪಕ್ಷಗಳನ್ನು ಬದಲಾವಣೆ ಮಾಡಿದರು. ಆದರೆ ಅವರ ವ್ಯಕ್ತಿತ್ವವನ್ನ ಎಲ್ಲೂ ಕೂಡ ಬದಲಾವಣೆ ಮಾಡಲಿಲ್ಲ. ಹಾಗಾಗಿ ಪ್ರತಿಯೊಬ್ಬ ಸಮಾಜದ ನಾಯಕರು ಅವರನ್ನು ಪ್ರೀತಿಸುವಂತಹ ವ್ಯಕ್ತಿ ಅವರಾಗಿದ್ದರು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಕಾಂಗ್ರೆಸ್ ಮುಖಂಡ ಸಂತೋಷ್ ಡಿ.ದೇವರಾಜ್, ಗಜೇಂದ್ರ, ಮುದುಗುಪ್ಪೆ ಮಾದೇವ್, ತಂದ್ರೆ ಧರ್ಮ, ಅಂಬೇಡ್ಕರ್‌ನಗರದ ಗಂಗಾಧರ್, ಸವಿತಾ ಸಮಾಜದ ಮುಖಂಡ ಮಹದೇವ್, ಬಸವರಾಜ್ ಇತರರಿದ್ದರು.

See also  ಸೆ.16ಕ್ಕೆ 'ರಿಯಾ' ಚಿತ್ರ ಬಿಡುಗಡೆ
Share This Article