More

    ಮೋದಿ ಭಾಷಣದಿಂದ ಮನಸ್ಸುಗಳು ಒಡೆಯುತ್ತಿವೆ

    ಜಮಖಂಡಿ: ನಗರದ ಓಲೆಮಠಕ್ಕೆ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಭೇಟಿ ನೀಡಿ ಶ್ರೀಮಠದ ಡಾ. ಚನ್ನಬಸವ ಶ್ರೀಗಳ ಜೊತೆ ಕೆಲ ಕಾಲ ಚರ್ಚಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಡತನದಲ್ಲಿರುವ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಬೇಡ ಜಂಗಮ ಸಮಾಜಕ್ಕೆ ನಿಗಮ ಸ್ಥಾಪಿಸಿ 100 ಕೋಟಿ ರೂ. ಇಡುವಂತೆ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ ಎಂದರು.

    ಹಳೇ ಮಠಗಳು ಇದ್ದಲ್ಲಿ ಅವುಗಳಿಗೆ ಶಾಶ್ವತ ಅನುದಾನ ಬಜೆಟ್‌ನಲ್ಲಿಡಬೇಕು ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಿಂದ ಮನಸ್ಸುಗಳು ಒಡೆಯುತ್ತಿವೆ. ಹೊರತು ಮನಸ್ಸುಗಳು ಕೂಡುವುದಿಲ್ಲ. 10 ವರ್ಷಗಳಿಂದ ಸಮಾಜಗಳನ್ನು ಒಡೆಯುವ ಕೆಲಸ ಮಾಡ್ತಾ ಬಂದಿದ್ದಾರೆ. ದೇಶ ಅಧೋಗತಿಗೆ ಹೋಗಿದೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಹೋಗಿವೆ. ತುತ್ತು ಅನ್ನಕ್ಕೆ ಒದ್ದಾಡುವಂತ ಪರಿಸ್ಥಿತಿ ಬಂದಿದೆ. ಕೋಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದರು.

    ರಾಮ ಮಂದಿರ ಕಟ್ಟಿಸಿದರು ಇದಕ್ಕೆ ಸಂತೋಷ. ಇದರಿಂದ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿತು. ಮಂದಿರ, ಮಸೀದಿ ಕಟ್ಟುವಂತದ್ದು ನಮ್ಮ ಕೆಲಸ ಅಲ್ಲ, ಇದು ಮಠಾಧಿಪತಿಗಳ ಕೆಲಸ. ನಾವ್ಯಾಕೆ ಕೈ ಹಾಕಬೇಕು. ನಮ್ಮ ಕೆಲಸ ಕಸಗೂಡಿಸುವುದು, ಶುದ್ಧ ಮಾಡುವುದು ಎಂದರು.

    ಡಾ. ಬಾಬಾಸಾಹೇಬರ ಸಂವಿಧಾನ ಭಾರತದಲ್ಲಿ ಉಳಿಯಬೇಕು. ಭಾರತ ಮಾತೆ ಶಕ್ತಿಯುತವಾಗಿರಬೇಕು. ಕೇಂದ್ರದವರು ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ, ಅದು ತಪ್ಪು ಎಂದರು.

    ದೃತರಾಷ್ಟ್ರನಿಗೆ ಆತ ಪರಿಸ್ಥಿತಿನೂ ದೇವೇಗೌಡರಿಗೂ ಅವರ ಮಕ್ಕಳಿಂದ ಆಗ್ತಾ ಇದೆ ಎಂದರಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಗೆಲ್ಲುತ್ತಾರೆ ಎಂದರು.

    ಮುಖಂಡರಾದ ದಾದಾಪೀರ್ ಶೇಖ, ಇಸ್ಮಾಯಿಲ್ ಪಾರ್ಥನಳ್ಳಿ, ಅಬುಬಕರ್ ಕುಡಚಿ, ಅಕ್ಬರ್ ಜಮಾದಾರ, ಶಾಹೀದ್ ವರ್ತಿ, ಸಲೀಂ ರಾಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts