ಮಾಜಿ ಶಾಸಕ ವೈಎಸ್​​ವಿ ದತ್ತ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

YSV Datta (1)
Published on

ಬೆಂಗಳೂರು: ಮಾಜಿ ಶಾಸಕ ವೈಎಸ್​ವಿ ದತ್ತ ಅವರ ಬಂಧನಕ್ಕಾಗಿ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್​ ವಾರಂಟ್ ಜಾರಿಗೊಳಿಸಿದೆ. ಚೆಕ್​ ಬೌನ್ಸ್​ ಪ್ರಕರಣದಲ್ಲಿ ಅವರಿಗೆ ಈ ವಾರಂಟ್ ಜಾರಿ ಮಾಡಲಾಗಿದೆ.

ವೈಎಸ್​ವಿ ದತ್ತ ಅವರು ಮಹೇಶ್ ಎಂಬವರಿಗೆ ನೀಡಬೇಕಾಗಿದ್ದ ಹಣಕ್ಕೆ ಸಂಬಂಧಿಸಿದಂತೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಆದರೆ ವೈಎಸ್​ವಿ ದತ್ತ ನ್ಯಾಯಾಲಯಕ್ಕೆ‌ ನಿರಂತರವಾಗಿ ಗೈರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅದೇಶ ಹೊರಡಿಸಲಾಗಿದೆ.

ಹೀಗಾಗಿ ವೈಎಸ್​ವಿ ದತ್ತ ಅವರು ಬಂಧನ ಭೀತಿಯಲ್ಲಿ ಇರುವಂತಾಗಿದೆ. ಅರೆಸ್ಟ್ ವಾರಂಟ್ ಪ್ರಕಾರ ಅವರನ್ನು ಬಂಧಿಸಿ, ಆ.26ರಂದು ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರುಪಡಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net