ರಕ್ತದಲ್ಲಿ ಮುಳುಗಿದ ಪೆನ್ನು-ಪೆನ್ಸಿಲ್​, ಗಾಯಗೊಂಡ ಬಾಲಕಿ; ನಿಜಕ್ಕೂ ಇದೆಲ್ಲ ಪೇಶಾವರ ಮದರಸಾ ಸ್ಫೋಟದಲ್ಲಿ ಆಗಿತ್ತಾ?

fact
Published on

ಪೇಶಾವರ: ಇತ್ತೀಚೆಗೆ ಪಾಕಿಸ್ತಾನದ ಪೇಶಾವರದಲ್ಲಿ ಮದರಸಾ ಮೇಲೆ ಬಾಂಬ್​ ದಾಳಿ ನಡೆದಿರುವುದು ಗೊತ್ತೇ ಇದೆ. ಈ ಸ್ಥಳದಲ್ಲಿ ಬಾಂಬ್​ ಸ್ಫೋಟದಿಂದಾಗಿ ಅನೇಕರು ಮೃತಪಟ್ಟಿದ್ದರು. ಘಟನೆಗೆ ಸಂಬಂಧ ಪಟ್ಟಂತೆ, ಮಕ್ಕಳು ವಿದ್ಯಾಭ್ಯಾಸಕ್ಕೆ ಬಳಸುವ ಪೆನ್ನು, ಪೆನ್ಸಿಲ್​ ರಕ್ತದಲ್ಲಿ ಸಿಲುಕಿದ್ದ ಫೋಟೋವೊಂದು ವೈರಲ್​ ಆಗಿತ್ತು. ಓರ್ವ ಬಾಲಕಿ ತೀವ್ರವಾಗಿ ಗಾಯಾಳುವಾಗಿದ್ದ ಫೋಟೋವನ್ನು ಸಹ ಹೆಚ್ಚು ಜನರು ಹಂಚಿಕೊಂಡಿದ್ದರು. ಆದರೆ ಇಂಡಿಯಾ ಟುಡೇ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ಈ ಫೋಟೋಗಳ ಹಿಂದಿನ ಕಥೆಯನ್ನು ಹುಡುಕಿದಾಗ ನಿಜಾಂಶ ಹೊರಬಿದ್ದಿದೆ.

ವೈರಲ್​ ಆಗಿದ್ದ ಈ ಎರಡೂ ಫೋಟೋಗಳು ಪೇಶಾವರದಲ್ಲಿ ತೆಗೆದಿರುವುದಲ್ಲವೇ ಅಲ್ಲ. ರಕ್ತ ಸಿಕ್ಕ ಪೆನ್ನು ಪೆನ್ಸಿಲ್ಲಿನ ಫೋಟೋ 2018ರಲ್ಲೇ ತೆಗೆದಿರುವಂತದ್ದು. ಬಾಂಗ್ಲಾದೇಶದ ಢಾಕಾದಲ್ಲಿ ರಸ್ತೆ ಅಪಘಾತವಾದಾಗ ತೆಗೆದ ಫೋಟೋವದು. ಇನ್ನು ಗಾಯಗೊಂಡ ಬಾಲಕಿ ಫೋಟೋ ಕೂಡ ಪಾಕಿಸ್ತಾನದ್ದಲ್ಲ. ಅದು ಸಿರಿಯಾದಲ್ಲಿ ಸರ್ಕಾರಿ ಪಡೆ ನಡೆಸಿದ ವೈಮಾನಿಕ ದಾಳಿಯ ಸಮಯದಲ್ಲಿ ತೆಗೆದಿರುವಂತಹ ಫೋಟೋ. ಈ ಚಿತ್ರವನ್ನು ಗೆಟ್ಟಿ ಇಮೇಜಸ್​ ವೆಬ್​ಸೈಟ್​ನಲ್ಲಿ ಜನವರಿ 11ರಂದೇ ಅಪ್​ಲೋಡ್​ ಮಾಡಲಾಗಿದೆ.

ಈ ಎರಡೂ ಫೋಟೋಗಳನ್ನು ಪೇಶಾವರದ ಮದರಸಾ ಬಾಂಬ್​ ಸ್ಫೋಟಕ್ಕೆ ಸುಮ್ಮನೆ ಹೋಲಿಸಲಾಗಿದೆ ಎನ್ನುವುದು ಫ್ಯಾಕ್ಟ್​ ಚೆಕ್​ನಿಂದ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net