ಮಗಳಿಗಾಗಿ ಕಾರುಗಳನ್ನೇ ಮಾರಾಟಕ್ಕಿಟ್ಟ ರಾಗಿಣಿ ಪೋಷಕರು! ಸಂಕಷ್ಟದಲ್ಲಿ ತಂದೆ-ತಾಯಿ...

ragini car
Published on

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿಗೆ ಎರಡು ತಿಂಗಳಾದರೂ ಜಾಮೀನು ಸಿಕ್ಕಿಲ್ಲ.

ರಾಗಿಣಿ ಜೈಲು ಸೇರುತ್ತಿದ್ದಂತೆ ನಗರದ ಜ್ಯುಡಿಶಿಯಲ್ ಲೇಔಟ್​ನಲ್ಲಿರುವ ನಟಿಯ ಕನಸಿನ ಮನೆಯನ್ನೇ ಅವರ ತಂದೆ ಮಾರಾಟಕ್ಕೆ ಇಟ್ಟಿದ್ದರು. ಆದರೆ, ಮನೆ ಸೇಲ್ ಆಗಲಿಲ್ಲ. ಇದೀಗ ನಟಿಯ ಕಾರುಗಳನ್ನೇ ಮಾರಾಟಕ್ಕಿಟ್ಟಿದ್ದಾರೆ.

ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಕೊಂಡಿರುವ ಮಗಳ ಕೋರ್ಟ್​, ವಕೀಲರ ಫೀಸು ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕನಸಿನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದ ರಾಗಿಣಿ ತಂದೆ ರಾಕೇಶ್ ದ್ವಿವೇದಿ, 'ಮನೆ ಸೇಲ್​ಗೆ ಇದೆ' ಎಂಬ ಜಾಹೀರಾತನ್ನು ಖಾಸಗಿ ವೆಬ್​ಸೈಟ್​ ಒಂದಕ್ಕೆ ಈ ಹಿಂದೆ ನೀಡಿದ್ದರು.

ಸದ್ಯ ಹೈಕೋರ್ಟ್​​ನಲ್ಲೂ ನಟಿ ರಾಗಿಣಿಗೆ ಬೇಲ್ ರಿಜೆಕ್ಟ್ ಆಗಿದೆ. ಕಾನೂನು ಹೋರಾಟ ನಡೆಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಗಿಣಿ ತಂದೆ-ತಾಯಿ, ಇದೀಗ ಎರಡು ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಮುಂದೆ ಕಾನೂನಿನ ಹೋರಾಟಕ್ಕೆ ಹಣದ ಅವಶ್ಯಕತೆ ಇದೆ. ಹಾಗಾಗಿ ಕಾರು ಮಾರಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net