ಆಸ್ಟ್ರೇಲಿಯಾದಲ್ಲಿಯೂ ಸುಶಾಂತ್​ ಸಾವಿಗೆ ನ್ಯಾಯ ಸಿಗಲಿ ಎನ್ನುತ್ತಿವೆ ಬಿತ್ತಿ ಫಲಕಗಳು...

sushant_singh_
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನೇದಿನೆ ಜಟಿಲವಾಗುತ್ತಿದೆ. ಹೊಸ ಹೊಸ ಬೆಳವಣಿಗೆಗಳು, ಬದಲಾವಣೆಗಳಾಗುತ್ತಿವೆ. ಇತ್ತ ಸುಶಾಂತ್​ ಕುಟುಂಬದವರು, ಸ್ನೇಹಿತರು ಸುಶಾಂತ್​ ಸಾವಿಗೆ ನ್ಯಾಯ ಸಿಗುವುದಕ್ಕೆ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ. ಜಸ್ಟಿಸ್​ ಫಾರ್ ಸುಶಾಂತ್​, ಪ್ರೇ ಫಾರ್ ಸುಶಾಂತ್​ ಎಂದೆಲ್ಲ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದೇ ರೀತಿ ವಿದೇಶಗಳಲ್ಲೂ ಸಾವಿಗೆ ನ್ಯಾಯ ಸಿಗಬೇಕೆಂದು ಅಭಿಯಾನ ಮಾಡಲಾಗುತ್ತಿದೆ.

ಇದೀಗ ಆಸ್ಟ್ರೇಲಿಯಾದ ನಾಮಫಲಕಗಳಲ್ಲಿ , ಸಿಗ್ನಲ್​ ಬೋರ್ಡ್​ಗಳಲ್ಲಿ ಜಸ್ಟಿಸ್​ ಫಾರ್ ಸುಶಾಂತ್​ ಸಿಂಗ್​ ಎಂಬ ಅಕ್ಷರಗಳು ಕಾಣುತ್ತಿವೆ. ಅದರ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸುಶಾಂತ್​ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ಎಲ್ಲೆಲ್ಲಿ ಆ ಬೋರ್ಡ್​ಗಳನ್ನು ಕಾಣಬಹುದಾಗಿದೆ ಎಂಬ ಮಾಹಿತಿಯನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಆಸ್ಟ್ರೇಲಿಯಾದ ಹಲವೆಡೆ ಒಟ್ಟು ಏಳು ಬೋರ್ಡ್​ಗಳನ್ನು ಅಳವಡಿಸಲಾಗಿದೆ. ಅಲ್ಲಿನ ಜನ ಸುಶಾಂತ್​ ಸಾವಿಗೆ ನ್ಯಾಯ ಬೇಕೆನ್ನುತ್ತಿದ್ದಾರೆ. ಸೌತ್​ ಬ್ಯಾಂಕ್, ವಿಲಿಯಮ್ಸ್ ಲ್ಯಾಂಡಿಂಗ್​, ವಾಂಟರಿನಾ ಸೌತ್​, ಈಪ್ಪಿಂಗ್​ ಕೂಪರ್​, ಬೆಂಟ್​ಲೈ, ಡರ್ಮೈಟ್​, ಬೈಸ್​ ವಾಟರ್ ಗಳಲ್ಲಿ ಬೋರ್ಡ್​ ಹಾಕಲಾಗಿದೆ. ಈ ಎಲ್ಲ ಬಿಲ್​ ಬೋರ್ಡ್​ಗಳನ್ನು ನೋಡುತ್ತಿದ್ದರೆ, ಇಡೀ ಆಸ್ಟ್ರೇಲಿಯಾ ಸುಶಾಂತ್​ ಪರವಾಗಿದ್ದಾರೆ’ ಎಂದು ಸೋಷಿಯಲ್​ ಮೀಡಿಯಾದಲ್ಲಿ ಆ ಬೋರ್ಡ್​ಗಳ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net