ಆದಿತ್ಯ​ ಜತೆಗಿನ ಬ್ರೇಕಪ್ ನೋವಿನ​ ಮಧ್ಯೆಯೂ ನಗಲು ಪ್ರಯತ್ನಿಸಿದ ನಟಿ ಅನನ್ಯ! ನಿಮ್ಮೊಟ್ಟಿಗೆ ನಾವಿದ್ದೀವಿ ಎಂದ್ರು ಫ್ಯಾನ್ಸ್​

WhatsApp Image 2024-05-11 at 4.58.48 PM
Published on

ಮುಂಬೈ: ಇತ್ತೀಚೆಗಷ್ಟೇ 'ಲೈಗರ್'​​ ಚಿತ್ರದ ನಟಿ, ಬಾಲಿವುಡ್ ಹಾಟ್ ಬೆಡಗಿ ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ನಡುವಿನ ಲವ್ವಿ-ಡವ್ವಿಗೆ ಇದೀಗ ಬ್ರೇಕ್ ಬಿದ್ದಿದ್ದು, ಇಬ್ಬರ ಮಧ್ಯೆ ಇದ್ದ ಪ್ರೀತಿ, ಪ್ರೇಮ ಸಂಬಂಧ ಎಲ್ಲವೂ ಮಣ್ಣಾಗಿದೆ. ಸದ್ಯ ಬ್ರೇಕ್​ಅಪ್ ಘಟನೆಯಿಂದ ಅತೀವ ನೋವಲ್ಲಿರುವ ನಟಿಯೂ ಕಾರ್ಯಕ್ರಮವೊಂದರಲ್ಲಿ ಜನರ ಮುಂದೆ ಬಲವಂತವಾಗಿ ನಗಲು ಪ್ರಯತ್ನಿಸಿದ ದೃಶ್ಯ ಸದ್ಯ ಕ್ಯಾಮರಾಮ್ಯಾನ್ ಕಣ್ಣಿನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ನಟನಾ ವೃತ್ತಿಯ ಹೊರತಾಗಿಯೂ ಹಲವು ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಅನನ್ಯ ಪಾಂಡೆ, ಇತ್ತೀಚಿಗೆ ಮಾಲ್​ವೊಂದರಲ್ಲಿ ನಡೆದ ಈವೆಂಟ್​ಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಿಂಚಿನ ಉಡುಗೆ ತೊಟ್ಟು ಕ್ಯಾಮರಾಗಳ ಮುಂದೆ ಬಂದ ಅವರು, ಎಲ್ಲವೂ ಚೆನ್ನಾಗಿದೆ ಎನ್ನುವಂತೆ ಬಲವಂತವಾಗಿ ನಗಲು ಪ್ರಯತ್ನಿಸಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಇಂತಹ ಸಂದರ್ಭದಲ್ಲಿ ನೋವು ಇರುವುದು ಸಾಮಾನ್ಯ. ಮರೆಯುವ ಪ್ರಯತ್ನ ಮಾಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಫ್ಯಾನ್ಸ್​ ಧೈರ್ಯ ತುಂಬಿದ್ದಾರೆ.

ಪರಸ್ಪರ ಡೇಟಿಂಗ್ ಮಾಡುತ್ತಿದ್ದ ನಟ ಆದಿತ್ಯ ರಾಯ್ ಕಪೂರ್ ಮತ್ತು ನಟಿ ಅನನ್ಯ ಪಾಂಡೆ, ಕಳೆದ ಮಾರ್ಚ್​ ತಿಂಗಳಲ್ಲಿ ಬ್ರೇಕ್​ಅಪ್​ ಮಾಡಿಕೊಳ್ಳುವ ಮೂಲಕ ತಮ್ಮ ಮಧ್ಯೆಯಿದ್ದ ಪ್ರೇಮ ಸಂಬಂಧಕ್ಕೆ ಅಂತ್ಯವಾಡಿದರು. ಇದರಿಂದ ಇಬ್ಬರು ಭಾರೀ ದುಃಖಕ್ಕೆ ಒಳಗಾಗಿದ್ದು, ಸದ್ಯ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗುವ ಮೂಲಕ ನೋವನ್ನು ಮರೆಯುವ ಪ್ರಯತ್ನದಲ್ಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net