ಪ್ಯಾಂಟ್ ಬಟನ್ ತೆಗೆದು ಮಾದಕ ಪೋಸ್ ಕೊಟ್ಟ ರಾಗಿಣಿ: ಹಾರ್ಟ್‌ಬೀಟ್‌ ಹೆಚ್ಚಾಯ್ತೆಂದ ಫ್ಯಾನ್ಸ್‌

ragini
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಪ್ರತಿ ದಿನ ಒಂದೊಂದು ಲುಕ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಸೋಶಿಯಲ್​​ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇದೀಗ ನಟಿ ಹೊಸ ಫೋಟೋಗಳು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ.

ಜೀನ್ಸ್ ಪ್ಯಾಂಟ್, ಕ್ರಾಪ್ ಟಾಪ್ ತೊಟ್ಟು ರಾಗಿಣಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಆದರೆ ಜೀನ್ಸ್ ಪ್ಯಾಂಟ್ ಬಟನ್ ತೆಗೆದು ಮಾದಕ ನೋಟ ಬೀರಿದ್ದಾರೆ. ಆಕೆ ಬೋಲ್ಡ್‌ನೆಸ್ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ರಾಗಿಣಿಯ ಈ ಬಿಂದಾಸ್ ಫೋಟೊಶೂಟ್‌ಗೆ ಕೆಲವರು ಕೆಟ್ಟ ಕೆಟ್ಟ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ತುಪ್ಪದ ಹುಡುಗಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೊಶೂಟ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಹೊಸ ಫೋಟೊಶೂಟ್‌ನಲ್ಲಿ ಆಕೆಯ ಅವತಾರ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ವೀರ ಮದಕರಿ ಸಿನಿಮಾ ಮೂಲಕ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ, ಕೆಂಪೇಗೌಡ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ಕಿಚ್ಚ ಸುದೀಪ್ ಅವರ ಜೋಡಿಯಾಗಿ ಚಿತ್ರರಂಗಕ್ಕೆ ಬಂದ ಅವರು, ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಈ ವರ್ಷ ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ 'ವೃಷಭ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತುಪ್ಪದ ಬೆಡಗಿ ಎಂದರೆ ತಟ್ಟನೆ ನೆನಪಾಗುವುದು ರಾಗಿಣಿ ದ್ವಿವೇದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net