50ನೇ ವಿವಾಹ ವಾರ್ಷಿಕೋತ್ಸವ: ಬ್ಲಾಗ್​ನಲ್ಲಿ ಖುಷಿ ಹಂಚಿಕೊಂಡ ಬಿಗ್​ಬಿ

amitabha and jaya
Published on

ಮುಂಬೈ: ಬಾಲಿವುಡ್​ ನಟ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮದುವೆಯಾಗಿ ಇಂದಿಗೆ 50 ವರ್ಷಗಳು ಸಂದಿದ್ದು, ಈ ಹಿರಿಯ ಜೋಡಿಯು ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮಿತಾಭ್ ತಮ್ಮ ವಿವಾಹ ವಾರ್ಷಿಕೋತ್ಸವದ ಕುರಿತು ನಿನ್ನೆ ರಾತ್ರಿ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ. ಜೂನ್ 3 ಕೆಲವೇ ಹೊತ್ತಿನಲ್ಲಿ ಬರಲಿದ್ದು, ತದನಂತರ 50 ವರ್ಷಗಳಾಗಲಿವೆ. ಈಗಾಗಲೇ ಬಂದಿರುವ ಮತ್ತು ಮುಂದೆ ಬರಲಿರುವ ಪ್ರೀತಿ, ಗೌರವ, ಹಾರೈಕೆಗಳಿಗೆ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

ಅಮಿತಾಭ್​ ಮತ್ತು ಜಯಾಗೆ ಶುಭ ಹಾರೈಸಿದ ಶ್ವೇತಾ ಬಚ್ಚನ್:
ಇನ್ನು, ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಅವರ ಪುತ್ರಿ ಶ್ವೇತಾ ಬಚ್ಚನ್ ಇನ್​ಸ್ಟಾಗ್ರಾಂನಲ್ಲಿ ಅಮಿತಾಭ್​ ಹಾಗೂ ಜಯಾ ಬಚ್ಚನ್​ ಫೋಟೋ ಹಂಚಿಕೊಂಡು, ಸುವರ್ಣಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ತಂದೆ-ತಾಯಿಗೆ 50ನೇ ವಾರ್ಷಿಕೋತ್ಸವದ ಶುಭಾಶಯಗಳು. ಒಮ್ಮೆ ನಾನು ನನ್ನ ತಾಯಿಯನ್ನು ಸುದೀರ್ಘ ದಾಂಪತ್ಯದ ರಹಸ್ಯವೇನು? ಎಂದು ಕೇಳಿದ್ದೆ. ಆಗ ನನ್ನ ತಾಯಿ ಪ್ರೀತಿ ಎಂದು ಹೇಳಿದ್ದರೆ, ತಂದೆ ನನ್ನ ಹೆಂಡತಿ ಯಾವಾಗಲೂ ಸರಿ ಎಂದು ಹೇಳಿದ್ದರು ಶುಭಾಶಯಗಳನ್ನು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net