

ವಾಷಿಂಗ್ಟನ್: ತನ್ನ ಹೆಂಡತಿ ಎಂದು ಭಾವಿಸಿ ಮತ್ತೊಬ್ಬ ಮಹಿಳೆಗೆ ಅಮೆರಿಕಾ ಅಧ್ಯಕ್ಷ ಜೋಬಿಡನ್ ಮುಂದಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.
ಮರೆವು ಕಾಯಿಲೆಯಿಂದ ಬಳಲುತ್ತಿರುವಂತೆ ಕಾಣುವ ಬಿಡನ್ ಅವರ ನಡವಳಿಕೆಯು ಚರ್ಚೆಯ ವಿಷಯವಾಗಿದೆ. ಅವರು ಅನಗತ್ಯವಾಗಿ ನಗುವುದು, ಯಾವುದೇ ವೇದಿಕೆಯಲ್ಲಿದ್ದರೂ ತಪ್ಪು ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಇತ್ತೀಚೆಗೆ ಅವರು ವೇದಿಕೆಯಲ್ಲೇ ತನ್ನ ಪತ್ನಿ ಎಂದು ಭಾವಿಸಿ ಮತ್ತೊಬ್ಬ ಮಹಿಳೆಗೆ ಮುತ್ತು ಕೊಡಲು ಮುಂದಾಗಿದ್ದಾರೆ. ಆಗ ಹೌಹಾರಿ ಬಂದ ಅವರ ಪತ್ನಿ ಜಿಲ್ ಬಿಡೆನ್ ತಡೆದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದು ಹಳೆಯ ವಿಡಿಯೋ ಆಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜಿಲ್ ಬಿಡೆನ್ ಸರಿಯಾದ ಸಮಯಕ್ಕೆ ಬರದಿದ್ದರೆ ಆ ಮಹಿಳೆಯ ಕಥೆ ಏನು? ಇದು ತುಂಬಾ ಕೆಟ್ಟದಾಗಿದೆ ಎಂದು ಈ ವೀಡಿಯೊವನ್ನು ನೋಡಿದ ನೆಟಿಜನ್ಗಳು ಅಭಿಪ್ರಾಯಪಡುತ್ತಿದ್ದಾರೆ. 'ತನ್ನ ಹೆಂಡತಿ ಎಂದು ಭಾವಿಸಿ ಬೇರೊಬ್ಬ ಮಹಿಳೆಯನ್ನು ಚುಂಬಿಸಲು ಹೊರಟಿದ್ದ ಬಿಡೆನ್... ಕೈಯಲ್ಲಿ ಅಣುಬಾಂಬ್ ಗುಂಡಿಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬಿಡನ್ ಒಮ್ಮೆ ವೇದಿಕೆಯಲ್ಲಿ ಮೃತ ಅಧಿಕಾರಿಯ ಹೆಸರು ಹೇಳಿ ಸ್ವಾಗತಿಸಿದ್ದರು. ಮತ್ತೊಂದು ಕಾರ್ಯಕ್ರಮದಲ್ಲಿ ಅಧ್ಯಕ್ಷರು ವೇದಿಕೆಯಿಂದ ಇಳಿದು ಹೊರಟಿದ್ದರು. ಆಗ ಭದ್ರತಾ ಸಿಬ್ಬಂದಿ ನೆನಪಿಸಿ ಮತ್ತೆ ವೇದಿಕೆ ಮೇಲೇರುವಂತೆ ಮಾಡಿದರು.