

ಹೈದರಾಬಾದ್: ಕಾಮ ತುರಾನಂ ನಭಯ ನಲಜ್ಜಂ ಎನ್ನುತ್ತಾರೆ. ಅಂದರೆ ಕಾಮದಲ್ಲಿ ಭಯ, ನಾಚಿಕೆ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇಲ್ಲೊಬ್ಬ ಭೂಪ ಇದೆಲ್ಲ ಬಿಟ್ಟು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಒಡಹುಟ್ಟಿದ ತನ್ನ ಸ್ವಂತ ತಂಗಿಯನ್ನೇ ಗರ್ಭಿಣಿಯಾಗಿಸಿ ಮೃಗೀಯ ವರ್ತನೆ ತೋರಿದ್ದಾನೆ.
ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ಈ ಅಮಾನವೀಯ ಮತ್ತು ಅಸಹ್ಯಕರ ಘಟನೆ ನಡೆದಿದೆ. ಬಿಜಿನಪಲ್ಲಿ ಮಂಡಲಂನ ಕೀಮತಾಂಡಾದಲ್ಲಿ ಮಹಿಳೆಯೊಬ್ಬರು ತನ್ನ ಮಗ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದಾರೆ. ಮಗ ತನ್ನ 13 ವರ್ಷದ ತಂಗಿಯನ್ನು ಮರುಳು ಮಾಡಿ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಬಾಲಕಿ ಗರ್ಭಿಣಿಯಾದಾಗ ಈ ಹೇಯ ಘಟನೆ ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ ಅಣ್ಣ-ತಂಗಿ ವನಪರ್ತಿ ಜಿಲ್ಲೆಯ ಗೋಪಾಲಪೇಟ ಮಂಡಲದ ಬುದ್ದರಾಮ ಅರಣ್ಯ ಪ್ರದೇಶಕ್ಕೆ ತೆರಳಿದ್ದಳು. ಮರುದಿನ ಕಿಲ್ಲಾಘಣಪುರದಲ್ಲಿ ನಡೆದು ಹೋಗುತ್ತಿದ್ದಾಗ ಸ್ಥಳೀಯರು ಅನುಮಾನಗೊಂಡು 1098 ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ವನಪರ್ತಿ ಚೈಲ್ಡ್ ಲೈನ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಮಹೆಬೂಬನಗರ ಟೂ ಟೌನ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಅಲ್ಲಿನ ಪೊಲೀಸರು ಅವರನ್ನು ಬಿಜಿನಪಲ್ಲಿ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ನಾಗರ್ ಕರ್ನೂಲ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ತಾಯಿ ದೂರಿನ ಮೇರೆಗೆ ಬಿಜಿನಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಹೊರ ಬೀಳುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡಿದೆ.
ಸಿನಿಮಾ, ಟಿವಿ ಮತ್ತು ಮೊಬೈಲ್ಗಳ ಪ್ರಭಾವದಿಂದ ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿ ಅತ್ಯಾಚಾರ ಮತ್ತು ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕೃತ್ಯಗಳಲ್ಲಿ ತೊಡಗುವುದನ್ನು ಕಾಣಬಹುದು. ಇಂತಹ ಪರಿಸ್ಥಿತಿಗಳಲ್ಲಿ ಮಾನವ ಮೃಗಗಳಿಂದ ತಂಗಿಯನ್ನು ಕಾಪಾಡಬೇಕಾದ ಅಣ್ಣ ತನ್ನ ಸ್ವಂತ ತಂಗಿ ಎಂಬುದನ್ನೂ ಬಿಟ್ಟು ಪಶುವಿನಂತೆ ವರ್ತಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.