

ಜುನ್ನಾರ್: ಪ್ರಾಣ ರಕ್ಷಣೆಗಾಗಿ ಬಳಸುವ ಆಂಬುಲೆನ್ಸ್, ನಿಂತಿದ್ದ ವ್ಯಕ್ತಿಯ ಮೇಲೆ ಎರಡೆರಡು ಬಾರಿ ಹರಿದ ಘಟನೆ ಮಹಾರಾಷ್ಟ್ರದ ಜುನ್ನಾರ್‌ನಲ್ಲಿ ನಡೆದಿದೆ.
ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾರ್ಕಿಂಗ್‌ನಲ್ಲಿ ನಿಂತಿದ್ದ ಆಂಬ್ಯುಲೆನ್ಸ್ ಹಿಂದೆ ವ್ಯಕ್ತಿಯೊಬ್ಬ ಹೊರಟಿದ್ದ. ಈ ವೇಳೆ ಆಂಬುಲೆನ್ಸ್ ಚಾಲಕ ವಾಹನವನ್ನು ರಿವರ್ಸ ಚಲಾಯಿಸಿದ್ದು, ವ್ಯಕ್ತಿಯ ಕೂಡಲೇ ವಾಹನದಡಿ ಸಿಲುಕಿದ್ದಾನೆ.
ಈ ವೇಳೆ ಆಂಬುಲೆನ್ಸ್ ಚಾಲಕ ಮತ್ತೊಮ್ಮೆ ವಾಹನವನ್ನು ವ್ಯಕ್ತಿಯ ಮೇಲೆ ಚಲಾಯಿಸಿದ್ದು, ಅಪಘಾತದಲ್ಲಿ ಆತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯು ಜುಲೈ 1ರಂದು ಸಂಭವಿಸಿದ್ದು, ಇತ್ತೀಚಿಗೆ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಜೀವದಾಯಿನಿ ಎಂಬ ಆಂಬುಲೆನ್ಸ್ ಹಾಗೂ ವಾಹನ ಚಾಲಕನಿಗಾಗಿ ಶೋಧನೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)