More

    VIDEO | ಚಾಲಕನ ನಿರ್ಲಕ್ಷ್ಯಕ್ಕೆ ಪ್ರವಾಹದಲ್ಲಿ ಸಿಲುಕಿದ ಬಸ್​​, ಕಿಟಕಿ ಮೂಲಕ ಪ್ರಾಣ ಉಳಿಸಿಕೊಂಡ ಪ್ರಯಾಣಿಕರು

    ಡೆಹ್ರಾಡೂನ್‌: ಪ್ರವಾಹಕ್ಕೆ ಸಿಲುಕಿದ ಬಸ್​ನ ಕಿಟಿಕಿಯಿಂದ ಹೊರಬಂದು ಜನರು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನ ರಾಮಗಢ ಬಳಿ ನಡೆದಿದೆ.

    ಇದನ್ನೂ ಓದಿ: ರಾಜಕೀಯ ಮುಖಂಡನ ಕೌಟುಂಬಿಕ ಕಾರ್ಯಕ್ರಮದ ಮೇಲೆ ದುಷ್ಕರ್ಮಿಗಳಿಂದ ಪೆಟ್ರೋಲ್ ಬಾಂಬ್ ಎಸೆತ…

    ಗ್ರಾಮದ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರೂ ಚಾಲಕ ನಿರ್ಲಕ್ಷ್ಯ ತೋರಿ, ಬಸ್​ನ್ನು ಹಾಗೇ ಚಲಾಯಿಸಿದ್ದಾನೆ. ಅದೃಷ್ಟವಶಾತ್​ ಧಾರಾಕಾರವಾಗಿ ಹರಿಯುತ್ತಿದ್ದ ಪ್ರವಾಹದ ರಭಸಕ್ಕೆ ಬಸ್ ವಾಲಿತ್ತು. ಕೂಡಲೇ ಪ್ರಯಾಣಿಕರು ಕಿಟಕಿಯಿಂದ ಹೊರಬಂದು ಬಸ್​ ಛಾವಣಿ ಏರಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಮಳೆಯ ರಭಸದಿಂದ ಹರಿಯುವ ನದಿಯ ನೀರಿನಲ್ಲಿ ಸಿಲುಕಿದ ಪ್ರಯಾಣಿಕರು ಬಸ್‌ನಿಂದ ಸುರಕ್ಷಿತವಾಗಿ ಹೊರಬರಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

    ಉತ್ತರ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ದೆಹಲಿ ರಾಜ್ಯಗಳು ಕಳೆದ ಕೆಲವು ದಿನಗಳಿಂದ ಭಾರೀ ಪ್ರವಾಹಕ್ಕೆ ಸಾಕ್ಷಿಯಾಗುತ್ತಿವೆ. ಈ ರಾಜ್ಯಗಳಾದ್ಯಂತ ಭೂಕುಸಿತ. ಪ್ರವಾಹ ಮತ್ತು ಮಳೆಯ ಅಬ್ಬರಕ್ಕೆ ಎಲ್ಲವೂ ನೀರಿನಲ್ಲಿ ವಿನಾಶವಾಗುತ್ತಿದೆ. ಇಲ್ಲಿವರೆಗೆ ಭೂಕುಸಿತ ಮತ್ತು ಮಳೆ ಸಂಬಂಧಿತ ಘಟನೆಗಳಿಂದ ಉತ್ತರ ಭಾರತದ ಇದುವರೆಗೆ 28 ​ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.(ಏಜೆನ್ಸೀಸ್​​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts