More

    ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೆ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

    ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇದನ್ನೂ ಓದಿ: ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿದ ಅಮರನಾಥ ಯಾತ್ರಿಕರು…

    ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಕರಾವಳಿ ಭಾಗದಲ್ಲಿ ಮುಂದಿನ 5 ದಿನ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಲಾಗಿದ್ದು, ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಹಾವೇರಿ, ಗದಗ, ಧಾರವಾಡದಲ್ಲಿ ಸಾಧಾರಣ ಮಳೆ ಬೀಳುವ ಹಾಗೂ ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯನಗರ, ತುಮಕೂರು, ಮೈಸೂರಿನಲ್ಲಿ ಐದು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ.

    ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ಚರಂಡಿಯಲ್ಲಿ ಪತ್ತೆಯಾದ ಮತ ಪೆಟ್ಟಿಗೆ!

    ಮಲೆನಾಡಿನಲ್ಲಿ‌ ಹಲವು ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಇನ್ನೊಂದು ವಾರ ಸಾಧಾರಣ ಮಳೆ ಮುಂದುವರೆಯುವ ಲಕ್ಷಣಗಳು ಜಾಸ್ತಿಯಿದ್ದು, ಜುಲೈ 1ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ 34ರಷ್ಟು ಅಧಿಕ ಮಳೆಯಾಗಿದೆ. ಆದರೆ ಕೋಲಾರದಲ್ಲಿ ಶೇಕಡಾ 32, ಮಂಡ್ಯ 36, ಹಾಸನ ಶೇಕಡಾ 30ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

    ಕಳೆದ 7 ದಿನಗಳಲ್ಲಿ ಸುರಿದ ಜಿಲ್ಲಾವಾರು ಮಳೆಯ ಪ್ರಮಾಣ ಇಂತಿದೆ:
    ಬೆಂಗಳೂರು ನಗರ – 22.1 mm
    ಬೆಂಗಳೂರು ಗ್ರಾಮಾಂತರ – 20.1 mm
    ರಾಮನಗರ – 15.5 mm
    ಕೋಲಾರ – 9.3 mm
    ಚಿಕ್ಕಬಳ್ಳಾಪುರ -24.4 mm
    ತುಮಕೂರು – 23.7 mm
    ಚಿತ್ರದುರ್ಗ – 17.9 mm
    ದಾವಣಗೆರೆ – 30.3 mm
    ಚಾಮರಾಜನಗರ – 15 mm
    ಮೈಸೂರು – 35.2 mm
    ಮಂಡ್ಯ – 9.3 mm
    ಬಳ್ಳಾರಿ – 18.7 mm
    ವಿಜಯನಗರ – 28.9 mm
    ಕೊಪ್ಪಳ – 29.1 mm
    ರಾಯಚೂರು – 30.4 mm
    ಕಲಬುರ್ಗಿ – 33.5 mm
    ಯಾದಗಿರಿ – 32.9 mm
    ಬೀದರ್ – 72.3 mm
    ಬೆಳಗಾವಿ -44.5 mm
    ಬಾಗಲಕೋಟೆ -17.9 mm
    ವಿಜಯಪುರ – 19.4 mm
    ಗದಗ – 32.2 mm
    ಹಾವೇರಿ – 50.9 mm
    ಧಾರವಾಡ -46.9 mm
    ಶಿವಮೊಗ್ಗ – 198 mm
    ಹಾಸನ – 49.7 mm
    ಚಿಕ್ಕಮಗಳೂರು – 126.9 mm
    ಕೊಡಗು – 232.5 mm
    ದಕ್ಷಿಣ ಕನ್ನಡ – 558.6 mm
    ಉಡುಪಿ – 663.7 mm
    ಉತ್ತರ ಕನ್ನಡ – 381.2 mm

    ಜತೆಗೆ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಮಳೆಯು ಕಡಿಮೆಯಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.(ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts