More

    ರಾಜ್ಯಸಭೆಗೆ ಶಂಕರ್ ಅವರನ್ನು ಪರಿಗಣಿಸಿ

    ಕೊಪ್ಪ: ರಾಜ್ಯಸಭೆ ಚುನಾವಣೆ ಘೋಷಣೆಯಾಗಿದ್ದು, ಆ ಸ್ಥಾನಕ್ಕೆ ಮಲೆನಾಡು ಮತ್ತು ಕರಾವಳಿ ಭಾಗದ ಸಮಸ್ಯೆಗಳಿಗೆ ಧ್ವನಿಯಾಗುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಎಲ್.ಶಂಕರ್ ಅವರನ್ನು ಆಯ್ಕೆ ಮಾಡಿ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟ ಸಂಘಟನೆ ಕಾರ್ಯದರ್ಶಿ ಸುಧೀರ್‌ಕುಮಾರ್ ಮುರೊಳ್ಳಿ ಒತ್ತಾಯಿಸಿದರು.

    ಮಲೆನಾಡು ಹಾಗೂ ಕರಾವಳಿಯಲ್ಲಿ ಅರಣ್ಯ ಇಲಾಖೆ, ಕಸ್ತೂರಿ ರಂಗನ್ ವರದಿ, ಹಳದಿ ಎಲೆ ರೋಗ ಸೇರಿ ಹಲವು ಸಮಸ್ಯೆಗಳು ಬಾಧಿಸುತ್ತಿವೆ. ಹಾಲಿ ಬಿಜೆಪಿ ಸಂಸದರು ಜನರಿಗೆ, ರೈತರಿಗೆ ನ್ಯಾಯ ದೊರಕಿಸುವಲ್ಲಿ ವಿಲರಾಗಿದ್ದಾರೆ. ಆದ್ದರಿಂದ ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ಸಮಸ್ಯೆಯನ್ನು ಬಿಂಬಿಸಿ ನ್ಯಾಯ ದೊರಕಿಸಲು ಶಕ್ತರಾಗಿರುವ ಬಿ.ಎಲ್.ಶಂಕರ್ ಅವರನ್ನು ಕಾಂಗ್ರೆಸ್‌ನಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಜಿಲ್ಲೆಯಲ್ಲಿ ಕಾಂಗ್ರೆಸ್ ಐದಕ್ಕೆ ಐದೂ ಸ್ಥಾನಗಳಲ್ಲಿ ಗೆಲುವು ಕಂಡಿದೆ. ಜಿಲ್ಲಾಧ್ಯಕ್ಷರು ಹಾಗೂ ವಿವಿಧ ಮುಖಂಡರ ಶ್ರಮವಿದೆ. ಆದರ ಜತೆಗೆ ಬಿ.ಎಲ್.ಶಂಕರ್ ಅವರ ಶ್ರಮವನ್ನು ಮರೆಯುವಂತಿಲ್ಲ. ಆದ್ದರಿಂದ ಕಾಂಗ್ರೆಸ್‌ನಿಂದ ಶಂಕರ್ ಅವರನ್ನು ಅಯ್ಕೆ ಮಾಡಬೇಕು ಎಂದರು.
    ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ನವೀನ್ ಮಾವೀನಕಟ್ಟೆ, ನುಗ್ಗಿ ಮಂಜುನಾಥ್, ಪದ್ಮಾನಭ್, ವಿಜಯಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts