More

    ಗಾಳಿಗೆ ಹಾರಿ ಹೋದ ಹಾವೇರಿ ಚೆಕ್‌ಪೋಸ್ಟ್ !; ಸಿಡಿಲಿಗೆ ಬಲಿಯಾದ 4 ಕುರಿ

    ಹಾವೇರಿ: ವರ್ಷದ ಮೊದಲ ಮಳೆ ಜೋರಾದ ಗಾಳಿಯ ಅಬ್ಬರಕ್ಕೆ ಗುರುವಾರ ಇಲ್ಲಿನ ಪಿಬಿ ರಸ್ತೆಯ ಅಜ್ಜಯ್ಯನ ಗುಡಿ ಬಳಿ ನಿರ್ಮಿಸಿದ್ದ ಚೆಕ್‌ಪೋಸ್ಟ್‌ನ ತಗಡು, ಪೀಠೋಪಕರಣಗಳು ಹಾರಿಹೋಗಿವೆ.
    ಚೆಕ್‌ಪೋಸ್ಟ್‌ಗೆ ಅಳವಡಿಸಿದ್ದ ತಗಡು, ಟೆಂಟ್, ಕಂಬ ಗಾಳಿಗೆ ಹಾರಿ ಹೋಗಿ ಅಜ್ಜಯ್ಯನ ಗುಡಿ ಮೇಲೆ ಬಿದ್ದಿವೆ. ಕುರ್ಚಿ, ಟೇಬಲ್, ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಚೆಕ್‌ಪೋಸ್ಟ್ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹಾವೇರಿ ಗ್ರಾಮೀಣ ಠಾಣೆ ಸಿಪಿಐ ಸಂತೋಷ ಪವಾರ ತಿಳಿಸಿದ್ದಾರೆ.
    ಚರಂಡಿ ತ್ಯಾಜ್ಯ ರಸ್ತೆ ಮೇಲೆ
    ಹಾವೇರಿ ಶಿವಲಿಂಗ ನಗರದ ಶಿವಲಿಂಗೇಶ್ವರ ವೃತ್ತದಲ್ಲಿ ಮಳೆ ಸುರಿದ ಬಳಿಕ ಚರಂಡಿಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವೆಲ್ಲ ರಸ್ತೆ ತುಂಬ ಹರಿದಿದೆ. ನಗರಸಭೆ ಸಿಬ್ಬಂದಿ ಚರಂಡಿ ಸ್ವಚ್ಛಗೊಳಿಸದ ಪರಿಣಾಮ ಹೂಳು ತುಂಬಿಕೊಂಡಿತ್ತು. ಮಳೆ ಬಂದ ಕೂಡಲೇ ಎಲ್ಲ ಕಸ ರಸ್ತೆ ಮೇಲೆ ಬಂದಿದೆ. ಪರಿಣಾಮ ವಾಹನ ಸವಾರರು, ಸ್ಥಳೀಯರು ಪರದಾಡುವಂತಾಯಿತು. ನಗರದಲ್ಲಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
    ತಾಲೂಕಿನ ದಿಡಗೂರ ಗ್ರಾಮದ ಪ್ಲಾಟ್‌ನಲ್ಲಿ ಸಿಡಿಲು ಬಡಿದು ನಾಲ್ಕು ಕುರಿಗಳು ಮೃತಟ್ಟಿವೆ. ಏಕಾಏಕಿ ಶುರುವಾರ ಗಾಳಿ, ಗುಡುಗು ಕುರಿಗಳ ಮೇಲೆ ಎರಗಿದ ಪರಿಣಾಮ ಕುರಿಗಳು ಅಸುನೀಗಿವೆ. ಸಿಡಿಲಿನಿಂದಾಗಿ ಗ್ರಾಮದ ತೆಂಗಿನ ಮರವೊಂದು ಹೊತ್ತಿ ಉರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts