More

    33 ವರ್ಷದ ಗೆಳತಿಯೊಂದಿಗೆ ಪ್ರೀತಿ ಪ್ರೇಮ ಪ್ರಣಯ: 900 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪ್ರೇಯಸಿಗೆ ನೀಡಿದ ಮಾಜಿ ಪ್ರಧಾನಿ

    ಇಟಲಿ: ಮಾಜಿ ಪ್ರಧಾನಿಯೊಬ್ಬರು ತಮ್ಮ 33 ವರ್ಷದ ಗೆಳತಿಗೆ 900 ಕೋಟಿ ರೂಪಾಯಿಗೂ ಅಧಿಕ ಹಣವನ್ನು ತಮ್ಮ ಇಚ್ಛೆಯ ಮೇರೆಗೆ ಬಿಟ್ಟುಕೊಟ್ಟಿರುವ ಘಟನೆ ಇಟಲಿಯಲ್ಲಿ ನಡೆದಿದೆ.

    ಇದನ್ನೂ ಓದಿ: ITR ಫೈಲ್​ ಮಾಡುವವರಿಗೆ ಮಹತ್ವದ ಸುದ್ದಿ: ಆಧಾರ್​-ಪ್ಯಾನ್​ನಿಂದಾಗಿ ನಿಮಗೂ ಬೀಳಬಹುದು 6000 ರೂ. ದಂಡ

    ಮೂರು ಬಾರಿ ಇಟಲಿಯ ಪ್ರಧಾನಿಯಾಗಿದ್ದ ಸಿಲ್ವಿಯೊ ಬೆರ್ಲುಸ್ಕೋನಿ, ಉದ್ಯಮಿ ಮತ್ತು ಶ್ರೀಮಂತ ರಾಜಕಾರಣಿಯಾಗಿದ್ದು, ಈತನ ಸಾಮ್ರಾಜ್ಯದ ಮೌಲ್ಯವು 6 ಶತಕೋಟಿ ಯುರೋಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಕಳೆದ ತಿಂಗಳು ನಿಧನರಾದ ಮಾಜಿ ಪ್ರಧಾನಿ ಬೆರ್ಲುಸ್ಕೋನಿ 100 ಮಿಲಿಯನ್ ಯುರೋಗಳನ್ನು (ರೂ. 9,05,86,54,868) ತಮ್ಮ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ ನೀಡಿದ್ದಾರೆ.

    ಈ ಕುರಿತು ತಮ್ಮ ಉಯಿಲಿನಲ್ಲಿ ಬರೆದಿರುವ ಬೆರ್ಲುಸ್ಕೋನಿ ಹಾಗೂ ಫಾಸಿನಾ ನಡುವೆ 2020ರಲ್ಲಿ ಸಂಬಂಧ ಪ್ರಾರಂಭವಾಗಿದ್ದು, ಇಬ್ಬರೂ ಕಾನೂನುಬದ್ಧವಾಗಿ ಮದುವೆಯಾಗಿರಲಿಲ್ಲ. ಆದರೆ, ಸಾಯುವ ಮುನ್ನ ಫಸೀನಾಳನ್ನು ತನ್ನ ಹೆಂಡತಿ ಎಂದು ಮಾಜಿ ಪ್ರಧಾನಿ ಕರೆದಿದ್ದು, ಆಕೆಗೆ 33 ವರ್ಷ ವಯಸ್ಸಾಗಿದೆ. ಫಾಸಿನಾ ಇಟಾಲಿಯನ್ ಸಂಸತ್ತಿನ ಕೆಳಮನೆಯ ಸದಸ್ಯಳಾಗಿದ್ದಾಳೆ.

    ಇದನ್ನೂ ಓದಿ: VIDEO | ಚಾಲಕನ ನಿರ್ಲಕ್ಷ್ಯಕ್ಕೆ ಪ್ರವಾಹದಲ್ಲಿ ಸಿಲುಕಿದ ಬಸ್​​, ಕಿಟಕಿ ಮೂಲಕ ಪ್ರಾಣ ಉಳಿಸಿಕೊಂಡ ಪ್ರಯಾಣಿಕರು

    ಬೆರ್ಲುಸ್ಕೋನಿಯ ಇಬ್ಬರು ಮಕ್ಕಳಾದ ಮರೀನಾ ಮತ್ತು ಪಿಯರ್ ಸಿಲ್ವಿಯೊ ಒಟ್ಟು ಆಸ್ತಿಯ ಶೇಕಡಾ 53 ಪಾಲನ್ನು ಹೊಂದಿದ್ದು, ಇಡೀ ವ್ಯವಹಾರವನ್ನು ನಿಭಾಯಿಸುತ್ತಿದ್ದಾರೆ. ಜತೆಗೆ ಬೆರ್ಲುಸ್ಕೋನಿ, ತಮ್ಮ ಸಹೋದರ ಪಾವೊಲೊಗೆ 100 ಮಿಲಿಯನ್ ಮತ್ತು ಫೋರ್ಜಾ ಇಟಾಲಿಯಾ ಪಕ್ಷದ ಮಾಜಿ ಶಾಸಕರಾದ ಮಾರ್ಸೆಲ್ಲೊ ಡೆಲ್​ ಉಟ್ರಿಗೆ 30 ಮಿಲಿಯನ್ ಯುರೋಗಳನ್ನು ಬಿಟ್ಟುಕೊಟ್ಟಿದ್ದಾರೆ.

    ಇಟಲಿಯ ಮಾಜಿ ಪ್ರಧಾನಿ ಬೆರ್ಲುಸ್ಕೋನಿನ ತನ್ನ 86ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬರ್ಲುಸ್ಕೋನಿ ಹೆಸರು ಅನೇಕ ವಿವಾದಗಳಲ್ಲಿ ತಳುಕುಹಾಕಿಕೊಳ್ಳುವುದರ ಜತೆಗೆ 2013ರಲ್ಲಿ ಆತ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು. ಇದರೊಂದಿಗೆ ಭ್ರಷ್ಟಾಚಾರ ಮತ್ತು ತೆರಿಗೆ ವಂಚನೆ ಆರೋಪವೂ ಮಾಜಿ ಪ್ರಧಾನಿ ಮೇಲಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts