ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಸ್ಟೈಲಿಶ್ ಸ್ಟಾರ್​; ಜಾಗತಿಕ ಮಟ್ಟದಲ್ಲಿ 'ಪುಷ್ಪ' ಸದ್ದು!

Untitled design (92)
Published on

ಜರ್ಮನಿ: ತೆಲುಗು ಚಿತ್ರರಂಗದ ಐಕಾನ್ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ನಟಿಸಿದ್ದ ಬ್ಲಾಕ್​ಬಸ್ಟರ್​ 'ಪುಷ್ಪ ಭಾಗ 1'ರ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ, ಹೊಸ ದಾಖಲೆಯನ್ನೇ ಬರೆದಿತ್ತು. ಇದೀಗ ನಟ ತಮ್ಮ ಚಿತ್ರದ ಸ್ಕ್ರೀನಿಂಗ್​ಗಾಗಿ ಇಂದು ಜರ್ಮನಿಗೆ ತೆರಳಿದ್ದು, ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ತಾವು ನಟಿಸಿದ ಸೂಪರ್ ಹಿಟ್ ಪುಷ್ಪ: ದಿ ರೈಸ್ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ಗೆ ಜರ್ಮನಿಯಲ್ಲಿ ಪ್ರತ್ಯಕ್ಷವಾದ ಅಲ್ಲು ಅರ್ಜುನ್​, ಈ ಸಮಯದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಪುಷ್ಪ: ದಿ ರೈಸ್ ಸಿನಿಮಾ ಕೇವಲ ಭಾರತ ಮಾತ್ರವಲ್ಲದೇ ರಷ್ಯಾ, ಯುಎಸ್ಎ, ಗಲ್ಫ್, ಆಸ್ಟ್ರೇಲಿಯಾ ಮತ್ತು ಯುಕೆ ಸೇರಿದಂತೆ ಹಲವಾರು ದೇಶಗಳಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ, ಫಹದ್ ಫಾಸಿಲ್ ಮುಂತಾದವರ ತಾರಾಗಣವಿದೆ. ಈ ಚಿತ್ರವು ಇಂದಿಗೂ ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಗಳಿಸುತ್ತಲೇ ಇದ್ದು, ಅಲ್ಲು ಅರ್ಜುನ್ ಅವರ ಮುಂಬರುವ ಪುಷ್ಪ 2: ದಿ ರೂಲ್​ ಚಿತ್ರದ ಬಿಡುಗಡೆಗೆ ಸದ್ಯ ಕಾತರ ಹೆಚ್ಚಿದೆ.

ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಅಲ್ಲು ಅರ್ಜುನ್​ ಭೇಟಿ ನೀಡಿರುವುದನ್ನು ಕಂಡು ಸಂತಸಪಟ್ಟ ಫ್ಯಾನ್ಸ್, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುತ್ತಿರುವ ನಟನಿಗೆ ಭಾರೀ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net